

ಬೆಂಗಳೂರು: ಪ್ರಯಾಣಿಕರ ಬೇಡಿಕೆಯ ಮೇರೆಗೆ ಸರ್ಎಂವಿ. ಟರ್ಮಿನಲ್ ಬೆಂಗಳೂರು - ಕಾರವಾರ ನಿಲ್ದಾಣಗಳ ನಡುವೆ ಜುಲೈ 26 ಮತ್ತು 28 ರಂದು ಎರಡು ಟ್ರಿಪ್ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಬೆಂಗಳೂರು-ಕಾರವಾರ ವಿಶೇಷ ಎಕ್ಸ್ಪ್ರೆಸ್ ರೈಲು ಜುಲೈ 26 ಮತ್ತು 28 ರಂದು ಎಸ್ಎಂವಿಟಿ ಬೆಂಗಳೂರಿನಿಂದ ಮಧ್ಯರಾತ್ರಿ 12.30ಕ್ಕೆ ಹೊರಟು, ಅದೇ ದಿನ ಸಂಜೆ 4 ಗಂಟೆಗೆ ಕಾರವಾರ ತಲುಪಲಿದೆ. ಕಾರವಾರ ನಿಲ್ದಾಣದಿಂದ ಜುಲೈ 26 ಮತ್ತು 28 ರಂದು ರಾತ್ರಿ 11.30ಕ್ಕೆ ಹೊರಟ ರೈಲು ಮರುದಿನ ಸಂಜೆ 3.30ಕ್ಕೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ಈ ವಿಶೇಷ ರೈಲು ಬಾಣಸವಾಡಿ, ಚಿಕ್ಕಬಾಣಾವರ, ಕುಣಿಗಲ್, ಚನ್ನಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ&ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಮತ್ತು ಅಂಕೋಲಾ ನಿಲ್ದಾಣಗಳಲ್ಲಿ ನಿಲುಗಡೆ ಇರಲಿವೆ.