ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಭಕ್ತರನ್ನು ಸ್ವಾಗತಿಸಲು ವಿಶೇಷ ಸುಗಂಧ ದ್ರವ್ಯ! ಇದರ ವಿಶೇಷತೆ ಹೀಗಿದೆ

ವಿಜಯವಾಣಿ - 2024-01-22T064734.568
Published on

ಅಯೋಧ್ಯೆ: ಇಂದು ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾ ಸಮಾರಂಭಕ್ಕೆ ಇಡೀ ದೇಶವೇ ಸಿದ್ಧಗೊಂಡಿದ್ದು, ರಾಮ ಮಂದಿರ ಸಂಕೀರ್ಣ ಮತ್ತು ನಗರದ ಮೂಲೆ ಮೂಲೆಗಳನ್ನು ದೀಪಗಳು ಮತ್ತು ಹೂವುಗಳಿಂದ ಅದ್ದೂರಿಯಾಗಿ ಅಲಂಕರಿಸಲಾಗಿದೆ. ರಾಮನ ಪ್ರಾಣ ಪ್ರತಿಷ್ಠೆಯನ್ನು ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಲಿದ್ದು. ದೇವಾಲಯ ಪ್ರವೇಶಿಸುವವರನ್ನು ವಿಶೇಷ ಸುಗಂಧ ದ್ರವ್ಯ ತನ್ನ ಪರಿಮಳದಿಂದ ಸ್ವಾಗತಿಸಲಿದ್ದು, ಈ ಸುಗಂಧ ದ್ರವ್ಯ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಎಂದು ಉದ್ಯಮಿಯೊಬ್ಬರು ವಿಶೇಷವಾದ ಬರೇಲಿಯ ಸುಗಂಧ ದ್ರವ್ಯ ಮತ್ತು ಕುಂಕುಮವನ್ನು ಸಿದ್ಧಪಡಿಸಿದ್ದಾರೆ. ಇದು ತನ್ನ ಪರಿಮಳವನ್ನು ಸ್ಥಳದ ಪೂರ ಪಸರಿಸಲಿದ್ದು, ಅಯೋಧ್ಯೆಗೆ ಬರುವ ಪ್ರತಿ ಭಕ್ತರಿಗೆ ಈ ಸುಗಂಧ ದ್ರವ್ಯದ ಬಾಟಲಿಗಳು ಮತ್ತು ಧೂಪದ್ರವ್ಯವನ್ನು ಉಡುಗೊರೆಯಾಗಿ ಕೊಡಲಾಗುತ್ತದೆ. ಬರೇಲಿಯಿಂದ ಒಟ್ಟು 5,000 ಸುಗಂಧ ಬಾಟಲಿಗಳು ಮತ್ತು 7,000 ಕೇಸರಿ ಅಗರಬತ್ತಿಗಳನ್ನು ಕಳುಹಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಉದ್ಯಮಿ ಗೌರವ್ ಮಿತ್ತಲ್, "ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ವಿಶೇಷ ಸುಗಂಧ ದ್ರವ್ಯಗಳನ್ನು ಅಯೋಧ್ಯೆಗೆ ಕಳುಹಿಸಲಾಗಿದೆ ಮತ್ತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕೂಡ ಈ ದ್ರವ್ಯವನ್ನು ನೀಡಿದ್ದೇನೆ" ಎಂದು ತಿಳಿಸಿದ್ದಾರೆ.

“ಈ ವಿಶೇಷ ಸುಗಂಧ ದ್ರವ್ಯವನ್ನು ರಚಿಸಲು ನನ್ನನ್ನು ಕೇಳಲಾಯಿತು. ಇದಕ್ಕಾಗಿ ಕಸ್ತೂರಿ ಸುಗಂಧ ದ್ರವ್ಯ ಮತ್ತು ಕುಂಕುಮವನ್ನು ಅಭಿವೃದ್ಧಿಪಡಿಸಿದ್ದೇನೆ. ರಾಮಚರಿತಮಾನಸದಲ್ಲಿ, ರಾಮ ಜನಿಸಿದಾಗ, ದಶರಥ ಅವರು ಅಯೋಧ್ಯೆಯಾದ್ಯಂತ ಶ್ರೀಗಂಧ ಮತ್ತು ಕಸ್ತೂರಿಯನ್ನು ಸಿಂಪಡಿಸಿದ್ದರು ಎಂದು ಉಲ್ಲೇಖಿಸಲಾಗಿದೆ. ಆದ್ದರಿಂದ, ನೈಸರ್ಗಿಕ ಸುಗಂಧವನ್ನು ಸೃಷ್ಟಿಸಲು ನಾವು ಸಹ ಅದೇ ಅಂಶಗಳನ್ನು ಬಳಸಬೇಕು ಎಂದು ನಾನು ಭಾವಿಸಿ, ತಯಾರಿಸಿದ್ದೇವೆ" ಎಂದು ಮಿತ್ತಲ್ ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net