

ನವದೆಹಲಿ: ಟೆಸ್ಟ್ ಕ್ರಿಕೆಟ್ನಲ್ಲಿ ಕಳೆದೆರಡು ವರ್ಷಗಳಿಂದ "ಬಜ್ಬಾಲ್' ಎಂಬ ಆಕ್ರಮಣಕಾರಿ ಕಾರ್ಯತಂತ್ರದ ಮೂಲಕ ಯಶಸ್ಸು ಸಾಧಿಸಿರುವ ಇಂಗ್ಲೆಂಡ್ ತಂಡಕ್ಕೆ ಭಾರತ "ವಿರಾಟ್ಬಾಲ್' ಕಾರ್ಯತಂತ್ರದ ಮೂಲಕ ತಿರುಗೇಟು ನೀಡಬೇಕೆಂದು ಮಾಜಿ ನಾಯಕ ಸುನೀಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
"ವಿರಾಟ್ ಕೊಹ್ಲಿ ಯಾವಾಗಲೂ ಉತ್ತಮ ಚಲನೆಯೊಂದಿಗೆ ಆಡುತ್ತಾರೆ. ಅವರ ಹಾಲಿ ಫಾರ್ಮ್ನಲ್ಲಿ ನಾವು ವಿರಾಟ್ಬಾಲ್ ಮೂಲಕವೇ ತಿರುಗೇಟು ನೀಡಬಹುದು. ಕೊಹ್ಲಿ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸುವ ಉತ್ತಮ ಕೌಶಲ ಹೊಂದಿದ್ದಾರೆ. ಟೆಸ್ಟ್ನಲ್ಲಿ ಅವರು ಬಹುತೇಕ ಅರ್ಧಶತಕದಷ್ಟೇ (30) ಶತಕವನ್ನೂ (29) ಸಿಡಿಸಿದ್ದಾರೆ. ತಂಡದ ಇತರ ಬ್ಯಾಟರ್ಗಳೂ ಅದೇ ರೀತಿ ಆಡಬೇಕಿದೆ' ಎಂದು ಗಾವಸ್ಕರ್ ವಿವರಿಸಿದ್ದಾರೆ.
ಅಂದರೆ ಗಾವಸ್ಕರ್ ಪ್ರಕಾರ, ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸುವ ಕೌಶಲವೇ ವಿರಾಟ್ಬಾಲ್ ಆಗಿದೆ. ಆಂಗ್ಲರ ಆಕ್ರಮಣಕಾರಿ ಬಜ್ಬಾಲ್ ಕಾರ್ಯತಂತ್ರದ ಭಾರತದ ಗುಣಮಟ್ಟದ ಸ್ಪಿನ್ನರ್ಗಳ ಎದುರು ಯಶ ಕಾಣುವುದೇ ಎಂಬ ಕುತೂಹಲವೂ ತಮಗಿದೆ ಎಂದು ಗಾವಸ್ಕರ್ ಹೇಳಿದ್ದಾರೆ.