Bigg Boss ಮನೆಯಲ್ಲೊಂದು ಸ್ಪೆಷಲ್​ ಮೂಮೆಂಟ್​; ಹೊಟ್ಟೆಯಲ್ಲಿರುವ ಮಗು ನಂದೇ ಎಂದು ಕಿಚ್ಚನ ಬಳಿ ಒಪ್ಪಿಕೊಂಡ ತ್ರಿವಿಕ್ರಮ್​

BBKS 11
Published on

ಬೆಂಗಳೂರು: ಕನ್ನಡ ಕಿರುತೆರಯ ಪ್ರಖ್ಯಾತ ರಿಯಾಲಿಟಿ ಶೋ ಬಿಗ್​ಬಾಸ್​ (Bigg Boss) 11ನೇ ಆವೃತ್ತಿ ಶುರುವಾಗಿ ಐದು ವಾರಗಳು ಕಳೆದಿದ್ದು, ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಮಾತೃ ವಿಯೋಗದಿಂದ ಕಳೆದ ಎರಡು ವಾರ ನಿರೂಪಕ ಕಿಚ್ಚ ಸುದೀಪ್​ (Kichcha Sudeep) ವಾರದ ಪಂಚಾಯಿತಿಯನ್ನು ನಡೆಸಿಕೊಡಲು ಸಾಧ್ಯವಾಗಿರಲಿಲ್ಲ. ಇದೀಗ ಅವರು ಕಾರ್ಯಕ್ರಮಕ್ಕೆ ಕಮ್​ಬ್ಯಾಕ್​ ಮಾಡಿದ್ದು, ಶನಿವಾರದ ಸಂಚಿಕೆಯಲ್ಲಿ ವಾರದ ಪಂಚಾಯ್ತಿಯನ್ನು ನಡೆಸಿಕೊಟ್ಟಿದ್ದಾರೆ. ಈ ವೇಳೆ ಅಗಲಿದ ತಾಯಿಯನ್ನು ನೆನೆದು ಸುದೀಪ್ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ.

ಸುದೀಪ್​ (Kichcha Sudeep) ಅವರ ತಾಯಿಯ ಆರೋಗ್ಯ ಗಂಭೀರವಾಗಿದ್ದ ಸಮಯದಲ್ಲೂ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಅಕ್ಟೋಬರ್ 20 ರಂದು ಸುದೀಪ್ ಅವರ ತಾಯಿ ಸರೋಜಮ್ಮನವರು ನಿಧನ ಹೊಂದಿದ್ದರು.  ನೋವಿನಲ್ಲಿದ್ದ ಸುದೀಪ್ ಅಂದಿನ ವೀಕೆಂಡ್ ಪಂಚಾಯಿತಿ ನಡೆಸಿಕೊಡಲಿಲ್ಲ. ಅದಾದ ಮುಂದಿನ ವಾರದ ವೀಕೆಂಡ್ ಪಂಚಾಯ್ತಿಯನ್ನೂ ಸಹ ನಡೆಸಿಕೊಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ಈಗ ಸುದೀಪ್ ತಮ್ಮ ಜವಾಬ್ದಾರಿ ನಿರ್ವಹಿಸಲು ಬಿಗ್​ಬಾಸ್ (Bigg Boss)ಮನೆಗೆ ಮರಳಿದ್ದು, ಬಿಗ್​ ಬಾಸ್​ ವತಿಯಿಂದ ಸುದೀಪ್ ಅವರ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು.

ವಾರದ ಪಂಚಾಯಿತಿಯಲ್ಲಿ ನಿರೂಪಕ ಕಿಚ್ಚ ಸುದೀಪ್​ (Kichcha Sudeep) ಅವರು ಸ್ಫರ್ಧಿಗಳ ಒಂದಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಗೊತ್ತಿಲ್ಲದೆ ತಪ್ಪು ಮಾಡಿದವರಿಗೆ ಮತ್ತೊಮ್ಮೆ‌ ಮಾಡದಂತೆ ಸಲಹೆ ನೀಡುತ್ತಾರೆ. ಗೊತ್ತಿದ್ದು ತಪ್ಪು ಮಾಡಿದವರಿಗೆ ಎಚ್ಚರಿಕೆ ಕೊಡುತ್ತಾರೆ. ಆದರೆ, ಇಂದಿನ ಸಂಚಿಕೆಯಲ್ಲಿ ಹಾಸ್ಯಾಸ್ಪದ ಘಟನೆಯೊಂದು ನಡೆದಿದ್ದು, ಪ್ರೇಕ್ಷಕರು ಹಾಗೂ ಸ್ಫರ್ಧಿಗಳು ನಗೆಗಡಲಲ್ಲಿ ತೇಲಿದ್ದಾರೆ. ತ್ರಿಕೋನ ಪ್ರೇಮಕತೆ ಮಿ. ತ್ರಿವಿಕ್ರಮ್ ಜೊತೆ! ಎಂಬ ಅಡಿಬರಹದೊಂದಿಗೆ ಪ್ರೋಮೋ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಇಂದಿನ ಬಿಗ್​ಬಾಸ್​ (Bigg Boss) ಸಂಚಿಕೆಯಲ್ಲಿ ಭರಪೂರ ಮನರಂಜನೆ ಇರುವುದಾಗಿ ವಾಹಿನಿ ಮುನ್ಸೂಚನೆ ನೀಡಿದೆ.

ಉಗ್ರಂ ಮಂಜು ಅವರೇ ನೀವು ಭವ್ಯ, ಧನರಾಜ್ ನೀವು ಭನ್ಯಾ.. ನೀವಿಬ್ಬರು ಸೇರಿ ತ್ರಿವಿಕ್ರಮ್‌ನ ಲವ್ ಮಾಡ್ತಿದ್ದೀರಾ ಎಂದು ಸುದೀಪ್ ಹೇಳುತ್ತಾರೆ. ಆಗ ಭನ್ಯಾ ಪಾತ್ರಧಾರಿ ಧನರಾಜ್​  ನಾನು ಮೊದಲೇ ಹೇಳಿದ್ದೀನಿ ಅದು ನಂದು ಎಂದು ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಭವ್ಯಾ ಪಾತ್ರಧಾರಿ ಮಂಜು ಓಡೋ.. ಅತ್ತುಬುಡ್ತೀನಿ ನಿಂಕಲೋ ಓಟ ಎಂದು ಹೇಳುತ್ತಾರೆ. ಧನರಾಜ್​ ನೀ ಮಾಡಿದ್ದೇನು.. ಅದೇ ತಾನೇ.. ಬಿಗ್‌ಬಾಸ್‌ನಲ್ಲಿ. ಉಗ್ರಂ ಮಂಜು:ಹೇ...ಧನರಾಜ್:ನಾನು ಇಲ್ಲಿಯವರೆಗೂ ಒಂದು ವಿಷಯವನ್ನು ಹೇಳಿಲ್ಲ. ಹೊಟ್ಟೆಯಲ್ಲಿ ಒಂದು ಮಗು ಇದೆ ಎಂದರು. ಈ ವೇಳೆ ಇಡೀ ಮನೆಯಲ್ಲಿರುವ ಸ್ಫರ್ಧಿಗಳು ಹಾಗೂ ಕಿಚ್ಚ ಸುದೀಪ್‌ ಓಹ್ ಎಂದು ಹೇಳುತ್ತ ಜೋರಾಗಿ ನಗುತ್ತಾರೆ.

ಅನಂತರ ಕಿಚ್ಚ ಸುದೀಪ್ ತ್ರಿವಿಕ್ರಮ್ ಬಳಿ ಭವ್ಯಾ ಅಥವಾ ಭನ್ಯಾ ಎಂದು ಕೇಳಿದಾಗ, ಹೊಟ್ಟೆಲಿರೋದು ನಂದೆ ಎಂದು ತ್ರಿವಿಕ್ರಮ್ ಅವರು ಧನರಾಜ್ (ಭನ್ಯಾ) ಕೈ ಎತ್ತುತ್ತಾರೆ. ಆಗ ಸುದೀಪ್ ಹೊಟ್ಟೆಲಿರೋದು ನಂದೆ ಅಂತ ಕೈ ಎತ್ತಿದ್ರಿ.. ಪಕ್ಕದಲ್ಲಿ ಇರೋ ಆ ಕೈ ಯಾಕೆ ಬಿಡ್ತಿಲ್ಲ ತ್ರಿವಿಕ್ರಮ್​ ಕಾಲು ಎಳೆದಿದ್ದಾರೆ. ಈ ಪ್ರೋಮೋ ಇದೀಗ ಸಖತ್​ ವೈರಲ್​ ಆಗಿದೆ.

ಬಿಗ್‌ಬಾಸ್‌ (BiggBoss) ಕನ್ನಡ 11ರಲ್ಲಿ ಈ ವಾರ ಮನೆಯಿಂದ ಹೊರಹೋಗಲು ಗೌತಮಿ ಮತ್ತು ತ್ರಿವಿಕ್ರಮ್‌ ಬಿಟ್ಟು ಎಲ್ಲರೂ  ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್‌ ಹನುಮಂತ ಆಯ್ಕೆಯ ಅನುಸಾರ ಗೋಲ್ಡ್ ಸುರೇಶ್ ಅವರು ನೇರ ನಾಮಿನೇಟ್ ಆಗಿದ್ದಾರೆ. ಜೊತೆಗೆ ಮನೆಯಿಂದ ಹೊರಹೋಗುವಾಗ ವಿಶೇಷ ಅಧಿಕಾರದಿಂದ ಹಂಸಾ ಅವರು ಹನುಮಂತ ಅವರನ್ನು ನಾಮಿನೇಟ್‌ ಮಾಡಿದ್ದರು. ಮಿಕ್ಕಂತೆ ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮಾನಸ ಸಂತೋಷ್​ ,  ಉಗ್ರಂ ಮಂಜು, ಅನುಷಾ ರೈ , ಧರ್ಮ ಕೀರ್ತಿರಾಜ್ ,  ಐಶ್ವರ್ಯಾ, ಧನ್‌ರಾಜ್,‌  ಶಿಶರ್ ಶಾಸ್ತ್ರಿ ನಾಮಿನೇಟ್‌ ಆಗಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಮೋಕ್ಷಿತಾ ಪೈ ಹಾಗೂ ಐಶ್ವರ್ಯಾ ಶಿಂಧೋಗಿ ಸೇವ್​ ಆಗಿದ್ದರು. ಈ ವಾರ ಮನೆಯಿಂದ ದೀಪಾವಳಿ ಉಡುಗೊರೆಯಾಗಿ ಯಾರಿಗೆ ಸಿಹಿ ಮತ್ತು ಯಾರಿಗೆ ಕಹಿ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net