ಜೂ. ೩೦ ರಿಂದ ಮನೆ ಮನೆಗೆ ಭೇಟಿ, ಮಾಹಿತಿ ಸಂಗ್ರಹಣೆ

ಬಾಗಲಕೋಟೆ ಜಿಲ್ಲಾಽಕಾರಿ ಸಭಾಂಗಣದಲ್ಲಿ ಶುಕ್ರವಾರ ಎಸ್‌ಐಆರ್ ಪ್ರಕ್ರಿಯೆ ಕುರಿತು ಜಿಲ್ಲಾಽಕಾರಿ ಸಂಗಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಪರ ಜಿಲ್ಲಾಽಕಾರಿ ಅಶೋಕ ತೇಲಿ ಇದ್ದರು.
ಬಾಗಲಕೋಟೆ ಜಿಲ್ಲಾಽಕಾರಿ ಸಭಾಂಗಣದಲ್ಲಿ ಶುಕ್ರವಾರ ಎಸ್‌ಐಆರ್ ಪ್ರಕ್ರಿಯೆ ಕುರಿತು ಜಿಲ್ಲಾಽಕಾರಿ ಸಂಗಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಪರ ಜಿಲ್ಲಾಽಕಾರಿ ಅಶೋಕ ತೇಲಿ ಇದ್ದರು.
Published on
ಬಾಗಲಕೋಟೆ: ಜಿಲ್ಲಾದ್ಯಂತ ಅಕ್ಟೋಬರ ೧, ೨೦೨೬ನ್ನು ಅರ್ಹತಾ ದಿನಾಂಕವನ್ನಾಧರಿಸಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನಲೆಯಲ್ಲಿ ಜೂನ್ ೩೦ ರಿಂದ ಜುಲೈ ೨೯ ವರೆಗೆ ಮತಗಟ್ಟೆ ಅಽಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆAದು ಜಿಲ್ಲಾಽಕಾರಿ ಸಂಗಪ್ಪ ಅವರು ಹೇಳಿದರು.
ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಸ್‌ಐಆರ್ ಕುರಿತು ಮಾಹಿತಿ ಹರವಿದ ಅವರು, ಜಿಲ್ಲೆಯಲ್ಲಿ ೭ ಮತಕ್ಷೇತ್ರ ಒಳಗೊಂಡAತೆ ಒಟ್ಟು ೧೭೮೫ ಮತಗಟ್ಟೆಗಳು ಇದ್ದು, ಪ್ರತಿ ಮತಗಟ್ಟೆಗೆ ಓರ್ವ ಮತಗಟ್ಟೆ ಅಽಕಾರಿ ಹಾಗೂ ಪ್ರತಿ ೧೦ ರಿಂದ ೧೨ ಮತಗಟ್ಟೆ ಮಟ್ಟದ ಅಽಕಾರಿಗಳ ಮೇಲೆ ಓರ್ವ ಸುಪರವೈಜರನ್ನು ನೇಮಕ ಮಾಡಲಾಗಿದೆ ಎಂದರು.
ಮುಧೋಳ ಮತಕ್ಷೇತ್ರದಲ್ಲಿ ೨೧೨ ಮತಗಟ್ಟೆಗಳು ಇದ್ದರೆ, ತೇರದಾಳ ೨೩೬, ಜಮಖಂಡಿ ೨೩೨, ಬೀಳಗಿ ೨೬೫, ಬಾದಾಮಿ ೨೬೦, ಬಾಗಲಕೋಟೆ ೩೧೯ ಹಾಗೂ ಹುನಗುಂದ ಮತಕ್ಷೇತ್ರದಲ್ಲಿ ೨೬೧ ಮತಗಟ್ಟೆಗಳಿವೆ ಎಂದು ತಿಳಿಸಿದರು.
ಜೂನ್ ೪, ೨೦೨೬ರ ಅಂತ್ಯಕ್ಕೆ ೮೦೩೩೮೯ ಮಹಿಳೆಯರು, ೮೩೨೬೩೯ ಹಾಗೂ ೧೦೦ ಇತರೆ ಸೇರಿ ಒಟ್ಟು ೧೬,೩೬,೧೨೮ ಮತದಾರರಿದ್ದಾರೆ. ಜಿಲ್ಲೆಯ ೭ ಮತಕ್ಷೇತ್ರಗಳ ಮ್ಯಾಪಿಂಗ್ ಕಾರ್ಯ ಶೇ.೯೭.೦೭ ರಷ್ಟು ನಡೆದಿದೆ. ಮುಧೋಳ ಮತಕ್ಷೇತ್ರದಲ್ಲಿ ೯೮.೨೯ ರಷ್ಟು ಮ್ಯಾಪಿಂಗ್ ಕಾರ್ಯ ನಡೆದರೆ, ತೇರದಾಳದಲ್ಲಿ ಶೇ.೯೫.೩೧, ಜಮಖಂಡಿ ಶೇ.೯೯.೩೨, ಬೀಳಗಿ ಶೇ.೯೮.೫೩, ಬಾದಾಮಿ ಶೇ.೯೭.೩೫, ಬಾಗಲಕೋಟೆ ಶೇ.೯೨.೨೦ ಹಾಗೂ ಹುನಗುಂದ ಕ್ಷೇತ್ರದಲ್ಲಿ ಶೇ.೯೯.೦೩ ರಷ್ಟು ಮ್ಯಾಪಿಂಗ್ ಮಾಡಲಾಗಿದೆ. ಈ ಕಾರ್ಯದಲ್ಲಿ ವಿವಿಧ ರಾಜಕೀಯ ಪಕ್ಷಗಳ ಬೂತ ಮಟ್ಟದ ಏಜೆಂಟರು ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದು, ಮನೆ ಮನೆ ಭೇಟಿ ಸಮಯದಲ್ಲಿ ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿದರು.
ಈ ಬಗ್ಗೆ ಮಾಹಿತಿ ಬೇಕಾದಲ್ಲಿ ಸಹಾಯವಾಣಿ ಸಂಖ್ಯೆ ೧೯೫೦ಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು. ಬಾಗಲಕೋಟೆ ಜಿಲ್ಲೆಯ ಮತದಾರರಿಗೆ ಅನುಕೂಲವಾಗುವಂತೆ ಪ್ರತಿ ಗ್ರಾಪಂ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ವಾರ್ಡಗಳಲ್ಲಿ ಓಟರ್ ಪೇಸಿಲಿಟೇಶನ್ ಸೆಂಟರ ಹಾಗೂ ಪ್ರತಿ ಮತಗಟ್ಟೆಯಲ್ಲಿ ಬಿಎಲ್‌ಓ ಪೇಸಿಲಿಟೇಶನ್ ಸೆಂಟರ ಪ್ರಾರಂಭಿಸಲಿ ಕ್ರಮಕೈಗೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಽಕಾರಿ ಅಶೋಕ ತೇಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net