

ನವದೆಹಲಿ: ಹೊಸ ವಿನ್ಯಾಸದ ಬಟ್ಟೆಗಳನ್ನು ತೊಡುವುದು ಎಂದರೆ ಮಹಿಳೆಯರಿಗೆ ಸಖತ್ ಇಷ್ಟ. ಶಾಪಿಂಗ್ ಮಾಡಲು ಹಾಗೂ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲೆಂದೆ ಮಹಿಳೆಯರು ಹೆಚ್ಚಿನ ಸಮಯವನ್ನು ವ್ಯಯಿಸುತ್ತಾರೆ.
ಮದುವೆಯಲ್ಲಿ ಕೊಂಚ ವಿಶೇಷ ಮತ್ತು ವಿಭಿನ್ನವಾಗಿ ಕಾಣಿಸಿಕೊಳ್ಳಬೇಕೆಂದು ಮಹಿಳೆಯರು ಬಯಸುತ್ತಾರೆ. ಗ್ರ್ಯಾಂಡ್ ಡ್ರೆಸ್ ಮದುವೆಗೆ ಬೇಕಾಗಿರುತ್ತದೆ. ಹಾಗೆಯೇ ಇಲ್ಲೊಂದು ಮದುವೆ ಗೌನ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಗೌನ್ ವಿಶೇಷತೆ: ಈ ಗೌನ್ ವಿಶೇಷತೆಯೆಂದರೆ ಈ ಡ್ರೆಸ್ನ್ನು ಬರೋಬ್ಬರಿ 50,890 ಹರಳುಗಳನ್ನು ಬಳಸಿ ಸಿದ್ಧಪಡಿಸಲಾಗಿದೆ. ಈ ಡ್ರೆಸ್ ತಯಾರಿಸಲು ಸರಿಸುಮಾರು 8 ದಿನ ಸಮಯ ತೆಗೆದುಕೊಳ್ಳಲಾಗಿದೆ. ಹರಳುಗಳಿಂದ ಅಲಂಕರಿಸಲಾಗಿದೆ. ಬಿಳಿ ಬಣ್ಣದ ಮದುವೆ ಗೌನ್ ನೋಡಲು ಅತ್ಯಾಕರ್ಷಕವಾಗಿದೆ. ಈ ಗೌನ್ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ.
ಇಟಾಲಿಯನ್ ಬ್ರೈಡಲ್ ಫ್ಯಾಶನ್ ಬ್ರ್ಯಾಂಡ್ ಈ ಉಡುಪನ್ನು ವಿನ್ಯಾಸಗೊಳಿಸಿದ್ದು, ಈ ಉಡುಪನ್ನು ಮೈಕೆಲಾ ಫೆರೆರೊ ಫ್ಯಾಶನ್ ಶೋನಲ್ಲಿ ಪ್ರದರ್ಶಿಸಲಾಗಿದೆ. ಪ್ರದರ್ಶನದ ದಿನದಂದು, ಈ ಉಡುಪನ್ನು ಮಾಡೆಲ್ ಮಾರ್ಚೆ ಗೆಲಾನಿ ಕ್ಯಾವ್-ಅಲ್ಕಾಂಟೆ ಧರಿಸಿದ್ದರು.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾರ್ಗಸೂಚಿಗಳ ಪ್ರಕಾರ, ಬಳಸಿದ ಎಲ್ಲಾ ಹರಳುಗಳು ನೈಜವಾಗಿರಬೇಕು, ವಾಣಿಜ್ಯಿಕವಾಗಿ ಲಭ್ಯವಿರಬೇಕು ಮತ್ತು ಗುಣಮಟ್ಟ ಮತ್ತು ದೃಢೀಕರಣದ ಪ್ರಮಾಣಪತ್ರವನ್ನು ಹೊಂದಿರಬೇಕು.
ಹಿಂದಿನ ದಾಖಲೆಯನ್ನು Ozden Gelinlik Moda Tasarim Ltd. (ಟರ್ಕಿ) ಹೊಂದಿತ್ತು. 2011 ಜನವರಿ 29 ರಂದು 45,024 ಸ್ಫಟಿಕಗಳೊಂದಿಗೆ ಟರ್ಕಿಯ ಇಸ್ತಾನ್ಬುಲ್ನಲ್ಲಿರುವ ಫೋರಮ್ ಇಸ್ತಾನ್ಬುಲ್ ಶಾಪಿಂಗ್ ಮಾಲ್ನಲ್ಲಿ ಪ್ರಸ್ತುತಪಡಿಸಲಾಯಿತು.