ತನ್ನ ದೇಹದ ಭಾಗವನ್ನೇ ಬೇಯಿಸಿ ಬಾಯ್​​ಫ್ರೆಂಡ್​ಗೆ ತಿನ್ನಿಸಿದ ಯುವತಿ!

Paula Gonu
Published on

ಅಮೆರಿಕ: ನೀವು ಎಂದಾದರೂ ನಿಮ್ಮ ಸ್ವಂತ ದೇಹದ ಭಾಗವನ್ನು ತಿನ್ನಲು ಬಯಸುತ್ತೀರಾ? ಭಯಾನಕ ಅಲ್ಲವೇ? ಆದರೆ ಪೌಲಾ ಗೋನು ಎನ್ನುವ ಯುವತಿ ತನ್ನ ಮೊಣಕಾಲಿನ ಭಾಗವನ್ನು ಬೇಯಿಸಿ ತಾನು ತಿಂದು ಗೆಳೆಯನಿಗೆ ತಿನ್ನಿಸಿ ಸುದ್ದಿಯಾಗಿದ್ದಾಳೆ.

ಸ್ಪೇನ್‌ನ ನಿವಾಸಿ ಟ್ವಿಚ್ ಸ್ಟ್ರೀಮರ್ ಪೌಲಾ ಗೋನು ಇತ್ತೀಚೆಗೆ ಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವಳ ಕಾಲಿನ ಭಾಗದಿಂದ ತೆಗೆದ ಮೂಳೆಯ ಸಣ್ಣ ಮಾದರಿಯನ್ನು ಜಾರ್‌ನಲ್ಲಿ ಮನೆಗೆ ಕೊಂಡೊಯ್ಯಲು ಬಯಸುತ್ತೀರಾ ಎಂದು ವೈದ್ಯರು ಅವಳನ್ನು ಕೇಳಿದರು. ಅದರಂತೆ ಯುವತಿ ಮೊಣ ಕಾಲಿನ ಭಾಗವನ್ನು ತೆಗೆದುಕೊಂಡು ಬಂದಿದ್ದಾಳೆ.

ಶಸ್ತ್ರಚಿಕಿತ್ಸೆಯ ನಂತರ ಪೌಲಾ, ತನ್ನ ಕಾಲಿನ ಮೂಳೆ ತುಂಡನ್ನು ತಿನ್ನುವ ಬಯಕೆಯನ್ನು ಹೊಂದಿದ್ದಳು. ಈ ಕುರಿತಾಗಿ ತನ್ನ ಗೆಳೆಯನೊಂದಿಗೆ ತಮಾಷೆ ಮಾಡಲು ಪ್ರಾರಂಭಿಸಿದಳು. ಆದರೆ ಒಂದು ದಿನ ತನ್ನ ಕಾಲಿನ ಮೂಳೆಯಿಂದ ಪಾಸ್ತಾಕ್ಕೆ ಸೇರಿಸಿ ಒಂದು ಪದಾರ್ಥವನ್ನೇ ತಯಾರಿಸಿ ಸೇವಿಸಿದ್ದಾಳೆ.

"ಅದು ನನ್ನ ದೇಹದ ಭಾಗವಾಗಿದೆ ಮತ್ತು ನಾನು ಅದನ್ನು ಮತ್ತೆ ನನ್ನ ದೇಹದಲ್ಲಿ ಇಡಬೇಕಾಗಿತ್ತು ಹೀಗಾಗಿ ತಿನ್ನಲು ಬಯಸಿದೆ. ನಾನು ಮಂಡಿಚಿಪ್ಪನ್ನು ತಿಂದೆ. ನನ್ನ ಗೆಳೆಯನಿಗೆ ಮೂಳೆಯಿಂದ ತಯಾರಿಸಿದ ಇನ್ನೊಂದು ಪದಾರ್ಥವನ್ನು ನೀಡಿದೆ" ಎಂದಿದ್ದಾಳೆ. ಈ ಕುರಿತಾಗಿ ಈಕೆಯೆ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.

ಟ್ವಿಚ್ ಸ್ಟ್ರೀಮರ್ ಪೌಲಾ ಅವರು ಸೋಶಿಯಲ್​ ಮೀಡಿಯಾದಲ್ಲಿ 228,000 ಕ್ಕೂ ಹೆಚ್ಚು ಫಾಲೊವರ್ಸ್​​ ಹೊಂದಿದ್ದಾರೆ. ಈಕೆ ತನ್ನ ದೇಹದ ಭಾಗವನ್ನು ತಿಂದಿರುವ ವಿಚಾರ ತಿಳಿಸುತ್ತಿದ್ದಂತೆ ನೆಟ್ಟಿಗರು ಯುವತಿಯ ಈ ವಿಚಿತ್ರ ವರ್ತನೆ ಕುರಿತಾಗಿ ಕಾಮೆಂಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net