ಸ್ಪಂದನಾ ನಿಧನ ಹಿನ್ನೆಲೆ; ಮಲ್ಲೇಶ್ವರಂನ ಬಿ.ಕೆ.ಶಿವರಾಂ ಮನೆ ಸಮೀಪದ ದೇವಸ್ಥಾನಗಳು ಬಂದ್

Spandana-Vijay-Raghavendra-Wiki-1
Published on

ಬೆಂಗಳೂರು: ನಟ ವಿಜಯ ರಾಘವೇಂದ್ರ ಪತ್ನಿ ನಿಧನ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಬಿ.ಕೆ.ಶಿವರಾಂ ಮನೆ ಸುತ್ತಮುತ್ತಲಿರುವ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ.

ಬಿ.ಕೆ.ಶಿವರಾಂ ಕಾಡುಮಲ್ಲೇಶ್ವರ ದೇಗುಲದ ಅಧ್ಯಕ್ಷರಾಗಿರುವುದರಿಂದ ಕಾಡುಮಲ್ಲೇಶ್ವರ, ಲಕ್ಷ್ಮೀನರಸಿಂಹ, ಗಂಗಮ್ಮದೇವಿ ದೇಗುಲ, ದಕ್ಷಿಣಾಭಿಮುಖ ನಂದಿತೀರ್ಥ ದೇಗುಲಗಳು ಬಂದ್ ಆಗಿವೆ. ಬಿ.ಕೆ.ಶಿವರಾಂ ಬೆಂಬಲಿಗರು ದೇವಸ್ಥಾನಗಳ ಮುಖ್ಯ ದ್ವಾರಗಳನ್ನು ಬಂದ್ ಮಾಡಿಸಿದ್ದಾರೆ. ಆದರೆ ಮುಖ್ಯದ್ವಾರ ಮುಚ್ಚಿ ಹಿಂಭಾಗದ ಬಾಗಿಲಿನಿಂದ ದರ್ಶನ ಅವಕಾಶ ಕಲ್ಪಿಸಲಾಗಿದೆ.

ದೇಗುಲದ ಬಾಗಿಲು ಮುಚ್ಚಿರುವುದಕ್ಕೆ ಭಕ್ತರಲ್ಲಿ ಗೊಂದಲವುಂಟಾಗಿದ್ದು, "ಯಾಕೆ ಬಾಗಿಲು ಮುಚ್ಚಿದೆ"? ಅಂತ ಭಕ್ತರು ಜನರನ್ನು ವಿಚಾರಿಸುತ್ತಿದ್ದಾರೆ.

ಬಿ.ಕೆ.ಶಿವರಾಂ ಅವರ ಪುತ್ರಿ

ಸ್ಪಂದನಾ ಅವರು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ ಮಗಳು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನಿವಾಸಿಗಳು. ಕಾಂಗ್ರೆಸ್ ಹಿರಿಯ ಮುಖಂಡ, ಎಂಎಲ್​ಸಿ ಬಿಕೆ ಹರಿಪ್ರಸಾದ್ ಅವರು ಸ್ಪಂದನಾ ಅವರ ಚಿಕ್ಕಪ್ಪ. ಇನ್ನು ಸೋದರ ರಕ್ಷಿತ್ ಶಿವರಾಂ ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಸೋದರ ರಕ್ಷಿತ್ ಶಿವರಾಂ ಪರವಾಗಿ ಬೆಳ್ತಂಗಡಿ ಕ್ಷೇತ್ರದ ಗ್ರಾಮ ಗ್ರಾಮಗಳಿಗೆ ತೆರಳಿ ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ ಚುನಾವಣೆ ಪ್ರಚಾರ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net