

ಮಹಾರಾಷ್ಟ್ರ: ನಾಗ್ಪುರದ ವಾರ್ಧಾ ರಸ್ತೆಯ ಫ್ಲೈಓವರ್ನಲ್ಲಿ ಪ್ರಯಾಣಿಸುತ್ತಿದ್ದ ಬಾಲಿವುಡ್ ನಟ ಸೋನು ಸೂದ್ ಪತ್ನಿ ಕಾರು ಅಪಘಾತಕ್ಕೀಡಾಗಿದೆ. ರಸ್ತೆ ಅಪಘಾತದಲ್ಲಿ ಪ್ರಾಣಾಪಯದಿಂದ ಪಾರಾದ ಸೋನು ಸೂದ್ ಪತ್ನಿ ಸೋನಾಲಿ ಸೂದ್ ಮತ್ತು ಅವರ ಅತ್ತಿಗೆ ಸುನೀತಾ ಸಣ್ಣ-ಪುಟ್ಟ ಗಾಯಗಳಿಂದ ಆಸ್ಪತ್ರೆ ದಾಖಲಾಗಿದ್ದಾರೆ.
ಸೋನಾಲಿ ಸೂದ್ ಪ್ರಯಾಣಿಸುತ್ತಿದ್ದ ಕಾರು ಹಿಂದಿನಿಂದ ಟ್ರಕ್ಗೆ ಡಿಕ್ಕಿ ಹೊಡೆದ ಹಿನ್ನೆಲೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಸೋಮವಾರ (ಮಾ.24) ರಾತ್ರಿ 10.30ಕ್ಕೆ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಅಪಘಾತದಲ್ಲಿ ಗಾಯಗೊಂಡ ಸೋನಾಲಿ ಸೂದ್ ಮತ್ತು ಸುನೀತಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಾಗ್ಪುರದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿ, ಅಗತ್ಯ ಚಿಕಿತ್ಸೆ ಕೊಡಿಸಲಾಗಿದೆ,(ಏಜೆನ್ಸೀಸ್).