ಆರ್.ಟಿ.ಒ ಕಛೇರಿಯಲ್ಲಿ ಭ್ರಷ್ಟಾಚಾರ ಲೋಕಾಯುಕ್ತ ತನಿಖೆಗೆ ಒತ್ತಾಯ / ಮನವಿ ಸ್ವೀಕರಿಸುವ ಅಧಿಕಾರಿಯೇ ನಾಪತ್ತೆ ಏ.೧೬ ರಿಂದ ಕೆ.ಆರ್.ಎಸ್ ಸಂಘಟನೆಯಿAದ ಧರಣಿ ಸತ್ಯಾಗ್ರಹಕ್ಕೆ ನಿರ್ಧಾರ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ನಗರದ ಪ್ರಾದೇಶಿಕ ಸಾರಿಗೆ (ಆರ್.ಟಿ.ಒ) ಕಛೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಲೋಕಾಯುಕ್ತ ತನಿಖೆಗೆ ಒತ್ತಾಯಿಸುವಂತೆ ಕರ್ನಾಟಕ ರಿಪಬ್ಲಿಕನ್ ಸಂಘಟನೆ ವತಿಯಿಂದ ಮಂಗಳವಾರ ತಮಟೆ ಚಳುವಳಿಗೆ ನಿರ್ಧರಿಸಲಾಗಿತ್ತು. ಮನವಿ ಸ್ವೀಕರಿಸಬೇಕಾದ ಅಧಿಕಾರಿಯೇ ಇಲ್ಲವಾಗಿದ್ದು, ಏ.೧೬ ರಿಂದ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಕ್ಕನಾರಾಯಣ ತಿಳಿಸಿದರು.

ನಗರದ ಆರ್.ಟಿ.ಒ ಕಛೇರಿ ಬಳಿ ತಮಟೆ ಚಳುವಳಿಗೆ ಆಗಮಿಸಿ ಅಧಿಕಾರಿಗಳು ಇಲ್ಲದ ಕಾರಣ ಚಳುವಳಿಯನ್ನು ಮುಂದೂಡಿ ಮಾತನಾಡಿ, ಕೋಲಾರ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಭ್ರಷ್ಟಾಚಾರ ಮಿತಿಮೀರಿದೆ. ಡೈವಿಂಗ್ ತರಬೇತಿ ಕೇಂದ್ರಗಳ ಮಾಲೀಕರ ಜೊತೆಗೆ ಕೈ ಜೋಡಿಸಿ ಅನರ್ಹ ಅಭ್ಯರ್ಥಿಗಳಿಗೆ ಪರವಾನಗಿಗಳನ್ನು ನೀಡುವ ಮೂಲಕ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣವಾಗಬೇಕಾದರೆ ಲೋಕಾಯುಕ್ತರು ತನಿಖೆ ನಡೆಸಿ ಸಂಬAಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ಕ್ರಮವಹಿಸಬೇಕು. ಪ್ರತಿಭಟನೆಗೆ ಮಂಗಳವಾರ ಕರೆ ನೀಡಲಾಗಿತ್ತು. ಮನವಿ ಸ್ವೀಕರಿಸುವ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಆರ್.ಟಿ.ಒ ಅಧಿಕಾರಿ ವೇಣುಗೋಪಾಲ ರೆಡ್ಡಿ ಕುಮ್ಮಕ್ಕು ನಿಂದಾಗಿ ಖಾಸಗಿ ಬಸ್‌ಗಳಿಗೆ ಅಸಲಿ ಮಾರ್ಗಗಳು ಇಲ್ಲದೇ ಇದ್ದರೂ ಬೇಕಾಬಿಟ್ಟಿ ಅನ್ಯ ಮಾರ್ಗಗಳಲ್ಲಿ ಚಲುಸುತ್ತಿವೆ. ನಕಲಿ ರಸೀದಿಯನ್ನು ಬಳಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಶಾಲಾ ಕಾಲೇಜುಗಳ ವಾಹನಗಳಿಂದ ತಿಂಗಳ ಮಾಮೂಲಿ ನಡೆಯಯತ್ತಿದೆ. ಈ ಎಲ್ಲಾ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಲೋಕಾಯುಕ್ತ ಸಂಸ್ಥೆಯಿAದ ತನಿಖೆ ನಡೆಸಬೇಕು. ಇದಕ್ಕಾಗಿ ಏಪ್ರಿಲ್ ೧೬ ರಂದು ಕಛೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದರು.

ಪಿವಿಸಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಣಿ, ಕರ್ನಾಟಕ ರಿಪಬ್ಲಿಕನ್ ಸಂಘಟನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ ಜಿಲ್ಲಾ ಅಧ್ಯಕ್ಷ ವಿ.ಅಮರೇಶ್, ಬಂಗಾರಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ತಿಪ್ಪಯ್ಯ ಇದ್ದರು.

ಚಿತ್ರ ೨೫ ಕೆ.ಎಲ್.ಆರ್. ೦೩ : ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ಕಾರ್ಯಕರ್ತರು ಆರ್.ಟಿ.ಓ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಆರ್.ಟಿ.ಓ.ಕಛೇರಿ ಮುಂಭಾಗ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಕ್ಕನಾರಾಯಣ ಮಾತನಾಡಿದರು. ಪಿವಿಸಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಣಿ, ಕರ್ನಾಟಕ ರಿಪಬ್ಲಿಕನ್ ಸಂಘಟನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net