ತೃತೀಯಲಿಂಗಿಯನ್ನೇ ಮದುವೆ ಆಗೋದು ಎಂದು ಮಗ ಪಟ್ಟು! ಮಾನಸಿಕ ಹಿಂಸೆ ತಾಳಲಾರದೆ ಅತ್ಮಹತ್ಯೆಗೆ ಶರಣಾದ ಹೆತ್ತವರು| Transgender

dk (38) (1)
Published on

ಆಂಧ್ರಪ್ರದೇಶ: ತೃತೀಯಲಿಂಗಿಯನ್ನೇ(Transgender) ಮದುವೆಯಾಗಿವೆ ಎಂದು ಮಗನ ಹಠಕ್ಕೆ ಬೆಸತ್ತ ತಂದೆ-ತಾಯಿ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಂದ್ಯಾಲ ಜಿಲ್ಲೆಯಲ್ಲಿ ನಡೆದಿದೆ.

ನಂದ್ಯಾಲದ ನಿವಾಸಿಗಳಾದ ಸುಬ್ಬರಾಯುಡು(45) ಮತ್ತು ಪತ್ನಿ ಸರಸ್ವತಿ(38) ಅತ್ಮಹತ್ಯೆ ಮಾಡಿಕೊಂಡ ದಂಪತಿಗಳು ಎಂದು ಗುರುತಿಸಲಾಗಿದೆ. ಇವರ ಪುತ್ರ ಸುನೀಲ್​ ಕುಮಾರ್​, ತೃತೀಯಲಿಂಗಿ ಸಮುದಾಯದ ಜತೆ ಕಳೆದ ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದ. ಇದರಿಂದ ಅವರು(ತೃತೀಯಲಿಂಗಿ ಸಮುದಾಯ) ಕೊಟ್ಟಿದ್ದ 1.5 ಲಕ್ಷ ರೂ. ತನ್ನ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದ. ಈ ಹಿನ್ನೆಲೆ ಬೆಸತ್ತ ಪಾಲಕರು ಅತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ನಂದ್ಯಾಲ ಉಪವಿಭಾಗೀಯ ಪೊಲೀಸ್ ಅಧಿಕಾರಿ ಪಿ.ಶ್ರೀನಿವಾಸ್​ ರೆಡ್ಡಿ ಹೇಳಿದರು.

ತೃತೀಯಲಿಂಗಿ ಜತೆ ಸಂಬಂಧ ಹೊಂದಿದ್ದ ಸುನಿಲ್​ ಕುಮಾರ್​, ಅ ಮಹಿಳೆಯೊಂದಿಗೆ ಮದುವೆಯಾಗಲು ತಂದೆ-ತಾಯಿ ನಿರಕಾರಿಸಿದ್ದು. ಈ ವಿಷಯದ ಬಗ್ಗೆ ಮನೆಯಲ್ಲಿ ಅಗಾಗೆ ಗಲಾಟೆ ನಡೆಯುತ್ತಿತ್ತು. ಅಲ್ಲದೆ, ಈ ಹಿಂದೆ ಇದೇ ವಿಚಾರವಾಗಿ ಸುನಿಲ್​ ಅತ್ಮಹತ್ಯೆಗೆ ಯತ್ನಿಸಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಇನ್ನು ತೃತೀಯಲಿಂಗಿ ಸಮುದಾಯದ ಸದಸ್ಯರಿಗೆ ಸೇರಿದ 1.5 ಲಕ್ಷ ರೂ. ಸುನಿಲ್​ ಬಳಸಿಕೊಂಡಿದ್ದಾನೆ. ಈ ಹಿನ್ನೆಲೆ ಹಣ ವಾಪಸ್​ ಕೊಡುವಂತೆ ಸದಸ್ಯರು ಸುನಿಲ್​ ತಂದೆ-ತಾಯಿಗೆ ಎಲ್ಲರ ಎದುರಲ್ಲೆ ಬಹಿರಂಗವಾಗಿ ಕೇಳಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಅವಮಾನಗೊಂಡ ಇತನ ಪಾಲಕರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net