ತಲೆಗೆ ಹುಳ ಬಿಟ್ಟ ಲೆಕ್ಕಾಚಾರ; ಇದಕ್ಕೆ ಉತ್ತರ ಹುಡುಕಿದ್ರೆ ನೀವೇ ಬುದ್ಧಿವಂತರು! | Brain Teaser

ವಿಜಯವಾಣಿ - 2024-12-26T174055.337
Published on

Brain Teaser: ಅಂದು ಶಾಲೆಯಲ್ಲಿ ಹೇಳಿಕೊಟ್ಟ ಗಣಿತ ಲೆಕ್ಕಾಚಾರ ಕಂಡರೆ ದೂರ ಉಳಿಯುತ್ತಿದ್ದವರು, ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಬೇಕಿದ್ದ ಅಂಕಗಳನ್ನು ಗಳಿಸಲು ಎಷ್ಟು ಕಲಿಯಬೇಕೋ ಅಷ್ಟನ್ನು ಮಾತ್ರ ಕಲಿತು, ಬರೆದು ಪಾಸ್​ ಆಗಿದ್ದೇ ಇತಿಹಾಸ. ಹೀಗಿರುವಾಗ ಸುಮ್ಮನೆ ಬ್ರೇನ್​ ಟೀಸರ್​ ಎಂಬ ಹೆಸರಿನಡಿ ಯಾವುದೋ ಉತ್ತರ ಸಿಗದ ಗಣಿತ ಲೆಕ್ಕಾಚಾರವನ್ನು ಮುಂದಿಟ್ಟರೆ ಹೇಗೆ? ಉತ್ತರ ಗೊತ್ತಿರದ ಪ್ರಶ್ನೆಗೆ ಉತ್ತರ ಹುಡುಕುವ ಸವಾಲನ್ನು ಒಪ್ಪಿಕೊಳ್ಳುವ ಜನರು, ಅಂತಿಮವಾಗಿ ಯಾರಾದರೂ ಒಬ್ಬರು ಉತ್ತರಿಸಿದರೆ ಬಹಳ ಕಾತರದಿಂದ ಇಣುಕಿ ನೋಡ್ತಾರೆ. ಆದರೆ, ಅದ್ಯಾಕೋ ಇಲ್ಲಿ ನೀಡಿರುವ ಸಂಖ್ಯೆಗಳು ಮಾತ್ರ ನೆಟ್ಟಿಗರ ತಲೆಯನ್ನು ಹೊಕ್ಕಿ, ಹುಳ ಬಿಟ್ಟಿರುವುದು ಹಾಸ್ಯಸ್ಪದ.

ಇಂತಹ ಬ್ರೇನ್ ಟೀಸರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಸಿಗುತ್ತವೆ. ಕುತೂಹಲಕಾರಿ ಒಗಟುಗಳು, ಬುದ್ಧಿವಂತಿಕೆ ಟೆಸ್ಟ್ ಮಾಡುವ ಪ್ರಶ್ನಾವಳಿಗಳೂ ಮತ್ತು ಮನಸ್ಸಿಗೆ ಮುದ ನೀಡುವ ಗಣಿತದ ಸವಾಲುಗಳು ನೆಟ್ಟಿಗರನ್ನು ಉತ್ತರಿಸುವಂತೆ ಆಕರ್ಷಿಸುತ್ತವೆ. ಇವುಗಳಲ್ಲಿ, ಗಣಿತ ಆಧರಿತ ಪ್ರಶ್ನೆಗಳು ಬಹುತೇಕರ ಕುತೂಹಲವನ್ನು ಹೆಚ್ಚಿಸುತ್ತವೆ. ಉತ್ತರ ಗೊತ್ತಿರದಿದ್ದರೂ ಇದನ್ನು ಹೇಗಾದರೂ ಮಾಡಿ ಬಿಡಿಸಬೇಕು, ಇದಕ್ಕೆ ಉತ್ತರ ಕಂಡುಕೊಳ್ಳಬೇಕು ಎಂದು ನಾನಾ ಕಸರತ್ತು ನಡೆಸುತ್ತಾರೆ. ಸದ್ಯ ಈ ಮೇಲ್ಕಂಡ ಬ್ರೇನ್​ ಟೀಸರ್​ ಕೂಡ ಜಾಲತಾಣದಲ್ಲಿ ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆಯನ್ನು ಗಳಿಸಿದ್ದು, ಉತ್ತರಿಸಲು ವಿಫಲರಾಗುವಂತೆ ಮಾಡಿದೆ.

ಹೀಗಿದೆ ಗಣಿತದ ಒಗಟು 11 + 11 = 4, 12 + 12 = 6, 13 + 13 = 8, 14 + 14 = ?

ನೆಟ್ಟಿಗರಿಂದ ಉತ್ತರ ದೂರ..ದೂರ

ಮೇಲ್ಕಂಡ ಗಣಿತದ ಒಗ್ಗಟಿಗೆ ಉತ್ತರ ಕಂಡುಕೊಳ್ಳುವಲ್ಲಿ ಬಹುತೇಕರು ವಿಫಲರಾಗಿದ್ದು, ಡಿಕೋಡ್​ ಮಾಡಲು ಪರದಾಡಿದ್ದಾರೆ. ಅನೇಕರು ಈ ಕುರಿತು ಕಮೆಂಟ್​ ಸೆಕ್ಷನ್​ನಲ್ಲಿ ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಅರ್ಥವಾಗದ ಸಂಖ್ಯಾ ಒಗಟು ಎಂದಿದ್ದಾರೆ. ಇನ್ನೂ ಕೆಲವರು ಇದ್ಯಾಕೋ ಗೊಂದಲ ಮೂಡಿಸುವಂತಿದೆ, ಸಿಕ್ಕಾಪಟ್ಟೆ ಟ್ರಿಕೀ ಆಗಿದೆ ಎಂದು ಹೇಳಿದ್ದಾರೆ. ಒಬ್ಬರು ಮಾತ್ರ ಇದಕ್ಕೆ ಉತ್ತರ 10 ಎಂದು ತಿಳಿಸಿದ್ದಾರೆ. ಕೆಲವರು ಇದನ್ನು ಡಿಕೋಡ್​ ಮಾಡುವಲ್ಲಿ ಮೇಲುಗೈ ಸಾಧಿಸಿದರೂ ಅದರ ಉತ್ತರವನ್ನು ಹಂಚಿಕೊಳ್ಳುವಲ್ಲಿ ಹಿಂದೇಟು ಹಾಕಿದ್ದಾರೆ. ಸದ್ಯ ಈ ಪ್ರಶ್ನೆ ನೆಟ್ಟಿಗರ ಮಿದುಳಿಗೆ ಕೈಹಾಕಿದ್ದು, ಉತ್ತರಿಸುವಂತೆ ಸವಾಲು ಹಾಕಿದೆ. (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net