'UI' ಚಿತ್ರದಲ್ಲಿ ಉಪ್ಪಿ ತಾಯಿಯಾಗಿ ನಟಿಸಿರುವ ಕಲಾವಿದೆಯ ಅಸಲಿ ಅವತಾರ ಹೇಗಿದೆ ನೋಡಿ...

ವಿಜಯವಾಣಿ - 2024-12-26T133336.326
Published on

UI Actress: ಡಿ.20ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದ ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್​, ನಟ ಉಪೇಂದ್ರ ನಟಿಸಿ, ನಿರ್ದೇಶಿಸಿದ 'ಯುಐ' ಸಿನಿಮಾ ಹಲವಾರು ಥಿಯೇಟರ್​ಗಳಲ್ಲಿ ಇಂದಿಗೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಗಳಿಸಿರುವ ಉಪ್ಪಿ ಚಿತ್ರಕ್ಕೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

10 ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿರುವ ಉಪೇಂದ್ರ, 'ಯುಐ' ಮೂಲಕ ಮತ್ತೊಮ್ಮೆ ತಮ್ಮ ವಿಭಿನ್ನತೆಯನ್ನು ಪರದೆಯ ಮೇಲೆ ಪ್ರದರ್ಶಿಸಿದ್ದಾರೆ. ಚಿತ್ರದ ಹಲವು ಸನ್ನಿವೇಶಗಳನ್ನು ಡಿಕೋಡ್​ ಮಾಡಲು ಅಲ್ಲಲ್ಲಿ ಪರದಾಡಿದ ಪ್ರೇಕ್ಷಕರು, ಸಿನಿಮಾದಲ್ಲಿನ ಪಾತ್ರಗಳನ್ನು ಚೆನ್ನಾಗಿ ಗುರುತು ಹಿಡಿದಿದ್ದಾರೆ.

'ಸತ್ಯ' ತಾಯಿ

ಯುಐ ಚಿತ್ರದ ಮೊದಲಾರ್ಧದಲ್ಲಿ ಸತ್ಯ ತಾಯಿಗೆ ಎದುರಾಗುವ ಹೀನಾಯ ಪರಿಸ್ಥಿತಿಯನ್ನು ಗಮನಿಸುವ ಪ್ರೇಕ್ಷಕರಿಗೆ ದ್ವಿತೀಯಾರ್ಧದಲ್ಲಿ ನಡೆಯವ ಸನ್ನಿವೇಶಗಳು ಕೊಂಚ ಗೊಂದಲ ಮೂಡಿಸುತ್ತದೆ. ಸಿನಿಮಾ ಪೂರ ಉಪೇಂದ್ರ ಅವರ ತಾಯಿಯಾಗಿ ಕಾಣಿಸಿಕೊಳ್ಳುವ ಸ್ಯಾಂಡಲ್​ವುಡ್​ನ ಯುವ ನಟಿ ಮೇದಿನಿ ಕೆಳಮನಿ, ಒಂದೇ ಒಂದು ಡೈಲಾಗ್​ ಇಲ್ಲದೆ ಇಡೀ ಚಿತ್ರದಲ್ಲಿ ನಟಿಸಿರುವುದು ವಿಶೇಷ.

ಈ ಹಿಂದೆ 'ನಾನು ಲೇಡಿಸ್'​, 'ಪೇಪೇ', 'ದೋಬ್ರಾ' ಚಿತ್ರಗಳಲ್ಲಿ ಅಭಿನಯಿಸಿರುವ ಯುವ ನಟಿ ಮೇದಿನಿ ಕೆಳಮನೆ, 'ಯುಐ' ಚಿತ್ರದಲ್ಲಿ ತಮ್ಮ ವಯಸ್ಸಿಗೆ ಮೀರಿದ ಪಾತ್ರದಲ್ಲಿ ನಟಿಸಿರುವುದು ಅವರ ಸಿನಿ ಕರಿಯರ್​ಗೆ ಹೊಸ ತಿರುವು ನೀಡಿದಂತಿದೆ. ಸತ್ಯ ಮತ್ತು ಕಲ್ಕಿ ಭಗವಾನ್​ ತಾಯಿಯ ಪಾತ್ರದಲ್ಲಿ ಡಿಗ್ಲಾಮರಸ್​ ಆಗಿ ಅಭಿನಯಿಸಿರುವ ಮೇದಿನಿ ಅವರ ಬ್ಯೂಟಿಫುಲ್​ ಹಾಗೂ ಬೋಲ್ಡ್​ ಫೋಟೋಸ್​ ನೋಡಿದ್ರೆ ಸಿನಿಪ್ರೇಕ್ಷಕರ ಹುಬ್ಬೇರೋದು ಖಚಿತ. ಕೆಲವರಲ್ಲಿ ಅಚ್ಚರಿ ಮೂಡುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿವೆ ನೋಡಿ ಅವರ ಸುಂದರ ಫೋಟೋಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net