

ಯೂಟ್ಯೂನ್ ಕಂಟೆಂಟ್ ಕ್ರಿಯೇಟರ್ ಒಬ್ಬ ತನ್ನ ತಾಯಿಗೆ ಬರೊಬ್ಬರಿ 86,000 ರೂ. ಮೌಲ್ಯದ ಕಾಲಿಗೆ ಹಾಕುವ ಚಪ್ಪಲಿಯನ್ನು ಗಿಫ್ಟ್ ಅನ್ನು ನೀಡಿದ್ದು, ಅದರ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಅಲ್ಲದೆ, ಈ ವೈರಲ್ ವಿಡಿಯೋದ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಗರು ಚಪ್ಪಲಿ ರೇಟ್ಗೆ ಸಂಬಂಧಿಸಿದಂತೆ ಆನೇಕರು ಫಿದಾ ಆಗಿದ್ದು, ತರೆಹವಾರಿ ಕಾಮೆಂಟ್ಗಳನ್ನು ಹಾಕುತ್ತಿದ್ದಾರೆ.
ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಕಂಟೆಂಟ್ ಕ್ರಿಯೇಟರ್ ಯದುಪ್ರಿಯಮ್ ಮೆಹ್ತಾ ಎಂಬ ಯುವಕ ಡಿಯರ್ ಸ್ಟೋರ್‌ಗೆ ಕಾಲಿಡುವುದರಿಂದ ಹಿಡಿದು ಗ್ರ್ಯಾಂಡ್ ಅನ್‌ಬಾಕ್ಸಿಂಗ್‌ನವರೆಗಿನ ಸಂಪೂರ್ಣ ಅನುಭವವನ್ನು ವಿಡಿಯೋದಲ್ಲಿ ವಿವರವಾಗಿ ತೋರಿಸುತ್ತಾರೆ. 86,000 ರೂ. ಕಿ ಡಿಯರ್ ಬ್ರ್ಯಾಂಡ್ನ ಚಪ್ಪಲ್ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಕೊನೆಯದಾಗಿ ಈ ಚಪ್ಪಲ್ ಅನ್ನು ತನ್ನ ತಾಯಿಗೆ ನೀಡುತ್ತಿರುವ ಬಗ್ಗೆ ವಿಡಿಯೋದಲ್ಲಿದೆ.
ಇದನ್ನೂ ಓದಿ:ಸಮುದ್ರ ತಟದಲ್ಲಿ ಅಪರಿಚಿತ ಮಹಿಳೆ ಶವ
ನಿಮ್ಮ ತಾಯಿಗೆ ಬೇಕಾಗಿರುವುದು ಪ್ರೀತಿ ಮತ್ತು ಗೌರವ. ಬೇರೇನೂ ಮುಖ್ಯವಲ್ಲ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 250 ರೂ.ಗೆ ಖರೀದಿಸಬಹುದಿತ್ತು ಎಂದಿದ್ದಾರೆ. "ಅವಳು ಅದೃಷ್ಟದ ತಾಯಿ" ಮತ್ತು "ಇದು ಸುಂದರವಾಗಿದೆ" ಎಂಬಂತಹ ಕಾಮೆಂಟ್‌ಗಳೊಂದಿಗೆ ಅವರ ಭಾವನೆಯನ್ನು ಮೆಚ್ಚಿದ್ದಾರೆ.
ದಿ ಡೈಲಿ ಗಾರ್ಡಿಯನ್ ಪ್ರಕಾರ, ಐಷಾರಾಮಿ ಬ್ರಾಂಡ್‌ನ ವೆಬ್‌ಸೈಟ್‌ನಲ್ಲಿ ಡಿಯರ್ ಡ್ವೇ ಸ್ಲೈಡ್ ಅನ್ನು $775 (ಅಂದಾಜು 86,000 ರೂ.) ನಲ್ಲಿ ದರ ಇದೆ. ಅಲ್ಲದೆ, ಎರಡು ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ. ಇದು ಐಷರಾಮಿ ಸಂಕೇತಿಸುವ ಉತ್ಪನ್ನವಾಗಿದೆ ಎಂದು ಹೇಳಿದೆ.(ಏಜೆನ್ಸೀಸ್)