ರಾಜಧಾನಿಯಲ್ಲೇ ಹಾರಿತು ಪಾಕ್​ ಫ್ಲ್ಯಾಗ್!?; ಸಾಮಾಜಿಕ ಜಾಲತಾಣದಲ್ಲಿ ವೈರಲ್​..

Flag
Published on

ಬೆಂಗಳೂರು: ರಾಜ್ಯದಲ್ಲಿ ಮಂಗಳೂರು ಬಾಂಬ್​ ಸ್ಫೋಟಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿ ಸೂಕ್ಷ್ಮವಾಗಿ ಇರುವ ಸಮಯದಲ್ಲೇ ರಾಜಧಾನಿಯಲ್ಲೇ ಪಾಕ್​ ಧ್ವಜವನ್ನು ಹೋಲುವಂಥ ಬಾವುಟವೊಂದು ಹಾರಾಡುವ ಮೂಲಕ ಆತಂಕಕಾರಿ ವಿಷಯವೊಂದು ಕಂಡುಬಂದಿದೆ. ಈ ಕುರಿತ ಫೋಟೋ/ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಮಲ್ಲೇಶ್ವರದ ಮನೆಯೊಂದರ ಮೇಲೆ ಕಿಡಿಗೇಡಿಗಳು ಈ ಧ್ವಜ ಹಾರಿಸಿದ್ದು, ಇದು ಮೇಲ್ನೋಟಕ್ಕೆ ಪಾಕಿಸ್ತಾನದ ಧ್ವಜದ ಥರವೇ ಕಾಣಿಸುತ್ತಿದೆ. ಈ ಬಗ್ಗೆ ಮಲ್ಲೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ತಲುಪಿದ್ದು, ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ.

ಮಲ್ಲೇಶ್ವರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಎಲ್ಲಿಯ ಮನೆ, ಯಾರ ಮನೆ ಎಂಬಿತ್ಯಾದಿ ಅಂಶಗಳ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯಾವ ಮನೆ ಎಂಬುದು ಪತ್ತೆಯಾದ ಬಳಿಕ ಇನ್ನಷ್ಟು ಮಾಹಿತಿ ಹೊರಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net