ಗೃಹಪ್ರವೇಶದ ಮರುದಿನವೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ; ಮಗಳಿಂದಲೇ ಅಂತಿಮಸಂಸ್ಕಾರ..

Daughter
Published on

ಉತ್ತರಕನ್ನಡ: ವ್ಯಕ್ತಿಯೊಬ್ಬರು ತಮ್ಮ ಗೃಹಪ್ರವೇಶ ನಡೆಸಿದ ಮರುದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡುಮಕ್ಕಳಿಲ್ಲದ ಅವರಿಗೆ ಮಗಳೇ ಅಂತ್ಯಸಂಸ್ಕಾರ ನಡೆಸಿದ್ದಾಳೆ. ಉತ್ತರಕನ್ನಡ ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.

ಭಟ್ಕಳ‌ ತಾಲೂಕಿನ ಹಡೀಲು ಸಬ್ಬತ್ತಿಯಲ್ಲಿ ಈ ಪ್ರಕರಣ ನಡೆದಿದೆ. ಮಂಜುನಾಥ ನಾಗಪ್ಪ ನಾಯ್ಕ್ (51) ಸಾವಿಗೀಡಾದ ವ್ಯಕ್ತಿ. ಇವರ ಪುತ್ರಿ ಶ್ವೇತಾ ಅಂತ್ಯಕ್ರಿಯೆ ನಡೆಸಿದವರು. ನಿನ್ನೆಯಷ್ಟೇ ತಮ್ಮ ಗೃಹಪ್ರವೇಶವನ್ನು ನೆರವೇರಿಸಿದ್ದ ಮಂಜುನಾಥ್, ಇಂದು ಮನೆ ಬಳಿಯ ಮರಕ್ಕೆ ಲುಂಗಿ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸಾವಿಗೀಡಾದ ವ್ಯಕ್ತಿಗೆ ಗಂಡು ಮಕ್ಕಳು ಇಲ್ಲದ ಕಾರಣ ಮೂವರು ಹೆಣ್ಣುಮಕ್ಕಳ ಪೈಕಿ ಹಿರಿಯವಳಾದ ಶ್ವೇತಾ ಅಂತಿಮಸಂಸ್ಕಾರ ನಡೆಸಿದ್ದಾರೆ. ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಅಂತಿಮ ವಿಧಿವಿಧಾನಗಳನ್ನು ಮಗಳೇ ಪೂರೈಸಿದ್ದಾಳೆ. ಆತ್ಮಹತ್ಯೆಗೆ ಕಾರಣ ಏನು ಎಂಬ ಕುರಿತ ಖಚಿತ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net