ವಿ.ಸೋಮಣ್ಣ, ಡಿಕೆಶಿ ಜತೆ ಜತೆಯಲಿ; ಕಾಂಗ್ರೆಸ್​ ಸೇರ್ತಾರಾ ಸಚಿವರು?

dks somanna
Published on

ಬೆಂಗಳೂರು: ಸಚಿವ ವಿ ಸೋಮಣ್ಣ ಕಾಂಗ್ರೆಸ್​ಗೆ ಸೇರುತ್ತಾರಾ ಎನ್ನುವ ರೀತಿಯ ಸುದ್ದಿ ಅನೇಕ ದಿನಗಳಿಂದ ಕೇಳಿ ಬರುತ್ತಿದ್ದು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದರು. ಈ ನಡುವೆಯೇ ಈ ಫೋಟೋ ಕಂಡುಬಂದಿದ್ದು ಚುನಾವಣೆ ಹತ್ತಿರ ಇರುವಾಗ ಅಖಾಡಕ್ಕೆ ಬೆಂಕಿ ಹಾಕಿದಂತೆ ಆಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಮತ್ತು ಸಚಿವ ವಿ ಸೋಮಣ್ಣ ವಿಮಾನದಲ್ಲಿ ಅಕ್ಕಪಕ್ಕದಲ್ಲೇ ಕುಳಿತುಕೊಂಡು ಪ್ರಯಾಣ ಬೆಳೆಸಿದ್ದು ಇದೀಗ ಆ ಫೋಟೊ ಭಾರಿ ವೈರಲ್​ ಆಗಿದೆ. ಚುನಾವಣೆ ಇನ್ನೇನು ಸಮೀಪದಲ್ಲೇ ಇರುವಾಗ ಈ ರೀತಿಯಾಗಿ ಇಬ್ಬರೂ ಘಟಾನುಘಟಿ ನಾಯಕರು ಜತೆಯಲ್ಲೇ ಕಾಣಿಸಿಕೊಂಡಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟಿಸಿರುವುದು ಮಾತ್ರ ಸುಳ್ಳಲ್ಲ.  

ಈ ಫೋಟೊ ವೈರಲ್​ ಆಗಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು 'ಸೋಮಣ್ಣ ನಮ್ಮ ತಾಲೂಕಿನವರು. ಧರ್ಮದ ಕೆಲಸ,‌ಮಠ ಮಾನ್ಯ ಕೆಲಸಗಳನ್ನು ಒಟ್ಟಿಗೆ ಮಾಡ್ತೀವಿ. ಅವರು ನಮ್ಮ ತಾಲೂಕಿನವರು. ಕಾಡಿನ ಮಧ್ಯೆ ಅವರ ಊರು ಇದೆ. ಬೆಳಗ್ಗೆ ಸಾಯಂಕಾಲ ಊರಿಗೆ ಬರ್ತಿರ್ತಾರೆ. ಸೋಮಣ್ಣ ನಮ್ಮ ಕ್ಷೇತ್ರದವರು. ಅವರ ಹೆಸರಲ್ಲಿ ಒಂದು ರೋಡ್ ಕೂಡ ಇಟ್ಟಿದ್ದೇನೆ. ನಮ್ಮ ಕ್ಷೇತ್ರಕ್ಕೆ ಅಷ್ಟೋ ಇಷ್ಟೋ‌ ಸೇವೆ ಮಾಡಿದ್ದಾರೆ ಯಾವತ್ತೂ ಅವರು ಕಾಂಗ್ರೆಸ್ಗೆ ಬರ್ತೀನಿ ಅಂತಾ ಹೇಳಿಲ್ಲ. ನಾನೂ ಕರೆದಿಲ್ಲ. ನಮ್ಮ‌ ಕೆಲಸ ಮಾಡ್ಕೊಂಡು ಹೋಗ್ತಿದೀವಿ. ಸುಮ್ನೆ ಯಾಕೆ ಅವರನ್ನ ಎಳೆದು ತರ್ತೀರಿ? ಬೆಳಗಾವಿಯಿಂದ ಅಸೆಂಬ್ಲಿ ಮುಗಿಸಿಕೊಂಡು‌ ಬರ್ತಾ ಪಕ್ಕದಲ್ಲಿ ಕುಳಿತು ಕುಳಿತುಕೊಳ್ಳೊದರಲ್ಲಿ ಏನಿದೆ? ಎಲ್ಲರ ಪಕ್ಕದಲ್ಲೂ ಕುಳಿತುಕೊಳ್ತೀವಿ. ಅದರಲ್ಲಿ ಏನು ಸಮಸ್ಯೆ?' ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net