

ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದ ಬಿಎಸ್ಎಫ್ ಯೋಧ ಹಣಮಂತ ಮಲ್ಲಪ್ಪ ಮುಂಜೆ(40) ಅಸ್ಸಾಂನಲ್ಲಿ ನಿಧನರಾಗಿದ್ದಾರೆ.
ಆಸ್ಸಾಂನ ಗುವಾಹಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಣಮಂತ ಮಲ್ಲಪ್ಪ ಮುಂಜೆ ಅವರು ಭಾನುವಾರ ಬೆಳಗ್ಗೆ ಕರ್ತವ್ಯ ಮುಗಿಸಿಕೊಂಡು ಮನೆಗೆ ಬಂದು ಚಹಾ ಕುಡಿಯುವ ಸಂದರ್ಭದಲ್ಲಿ ಹೃದಯಾಘಾತವಾಗಿದೆ.
ಹಣಮಂತ ಮಲ್ಲಪ್ಪ ಮುಂಜೆ ಅವರು ಪತ್ನಿ ಮತ್ತು ಪುತ್ರಿ ಜತೆ ಗುವಾಹತಿಯಲ್ಲಿ ವಾಸಿಸುತ್ತಿದ್ದರು. ತಂದೆ, ತಾಯಿ, ಇಬ್ಬರು ಸಹೋದರರು, ಒಬ್ಬ ಸಹೋದರಿಯನ್ನು ಅಗಲಿದ್ದಾರೆ. ಯೋಧನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ವಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಸೋಮವಾರ ಯೋಧನ ಪಾರ್ಥೀವ ಶರೀರ ಸ್ವಗ್ರಾಮ ಬರುವ ನಿರೀಕ್ಷೆಯಿದೆ.