

ಬೆಂಗಳೂರು: ಅ.17ರಂದು ನವರಾತ್ರಿ ಆರಂಭವಾಗಿದ್ದು, ಕರೊನಾ ಆತಂಕದ ನಡುವೆಯೂ ನಾಡಿನೆಲ್ಲೆಡೆ ದಸರಾ ಸಂಭ್ರಮ ಕಳೆಗಟ್ಟಿದೆ. ನವರಾತ್ರಿಯ ಮೊದಲ ದಿನವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ, ಗಾಯಗೊಂಡಿರುವ ಲಕ್ಷ್ಮೀ ದೇವರ ಫೋಟೋವನ್ನು ತನ್ನ ಟ್ವಿಟರ್ನಲ್ಲಿ ಅಪ್ಲೌಡ್ ಮಾಡಿಕೊಂಡದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಫೋಟೋ ಹಾಕಿದ ವಿಜಯಲಕ್ಷ್ಮೀ ವಿರುದ್ಧ ಕೆಲ ನೆಟ್ಟಿಗರು ಕಿಡಿಕಾರಿದ್ದರೂ ಹಲವರು ಸಮ್ಮತಿ ಸೂಚಿಸಿದ್ದಾರೆ. ನಾಡಹಬ್ಬ ದಸರಾ ಆರಂಭದ ದಿನವೇ ವಿಜಯಲಕ್ಷ್ಮೀ ಅವರು ಗಾಯಗೊಂಡಿರುವ ಲಕ್ಷ್ಮೀ ಫೋಟೋವನ್ನು ಹಾಕಿದ್ದ ಉದ್ದೇಶ ಏನು ಗೊತ್ತಾ?
ದರ್ಶನ್ ಪತ್ನಿ ವಿಜಯಲಕ್ಷ್ಮೀ ಇತ್ತೀಚೆಗೆ ಉದ್ಯಮವೊಂದನ್ನು ಶುರು ಮಾಡಿದ್ದು, ನೈಸರ್ಗಿಕ ಆಹಾರ ಪದಾರ್ಥ ಮಾರಾಟ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.