ಸೇವೆ ಮಾಡಲು ಸಾಮಾಜಿಕ ಕಳಕಳಿ ಅವಶ್ಯ

skp rotary
ಶಿಕಾರಿಪುರದಲ್ಲಿ ರೋಟರಿ ಕ್ಲಬ್ ಕದಂಬ ಆಯೋಜಿಸಿದ್ದ ಕುಮದ್ವತಿ ಕಲಾ ಸಂಭ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಎಚ್.ಎಸ್.ಶಿವಪ್ರಕಾಶ್ ಎಂ.ಬಿ.ಶಿವಕುಮಾರ್, ಹರೀಶ್, ನಾಗರಾಜ್, ರವೀಂದ್ರನಾಥ ಐತಾಳ್ ಇತರರಿದ್ದರು.
Published on

ಶಿಕಾರಿಪುರ: ಸಾಮಾಜಿಕ ಕಳಕಳಿಯಿಂದ ಇಂದು ಸ್ಥಳೀಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸೇವಾಸಂಸ್ಥೆಗಳು ಇಂದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ಮೂಲ ಕಾರಣ ಸಂಸ್ಥೆಗಳ ಸಮಾಜಮುಖಿ ಚಿಂತನೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಭಾನುವಾರ ಕೆಆರ್‌ಸಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ರೋಟರಿ ಕ್ಲಬ್ ಕದಂಬ ಸಂಸ್ಥೆಯ ಕುಮದ್ವತಿ ಕಲಾ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಂಸ್ಕೃತಿಕ ಜಗತ್ತು ಅದ್ಭುತವಾಗಿದೆ. ಅದು ಅನಾವರಣ ಆಗಬೇಕಾದರೆ ಇಂತಹ ಸಾಂಸ್ಕೃತಿಕ ಉತ್ಸವಗಳ ಅಗತ್ಯವಿದೆ ಎಂದರು.

ಶಿಕಾರಿಪುರ ರೋಟರಿ ಕ್ಲಬ್ ಕದಂಬ ಅಧ್ಯಕ್ಷ ಶಿವಪ್ರಕಾಶ್ ಒಬ್ಬ ಪ್ರಗತಿಪರ ಕೃಷಿಕರೂ ಹೌದು. ಸಾಮಾಜಿಕ ಕಳಕಳಿ ಹೊಂದಿದ್ದಾರೆ. ಅವರ ಕಳಕಳಿಗೆ ತಕ್ಕದಾಗಿ ಕೆಲಸ ಮಾಡುವ ಅವಕಾಶ ದೊರಕಿದೆ. ಕೇವಲ ಮೂರು ವರ್ಷಗಳಲ್ಲಿ ಕ್ಲಬ್ ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡಿದೆ. ಸಂಸ್ಥಾಪಕ ಅಧ್ಯಕ್ಷ ಎಂ.ಆರ್.ರಘು ಅವರು ಈ ಸಂಸ್ಥೆಗೆ ಅಡಿಪಾಯ ಹಾಕಿಕೊಟ್ಟಿದ್ದಾರೆ. ಸೇವಾ ಕಾರ್ಯಗಳಿಗೆ ನಾನು ಸಹ ಸಾಧ್ಯವಾದಷ್ಟು ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ರೋಟರಿ ಕ್ಲಬ್ ಕದಂಬ ಅಧ್ಯಕ್ಷ ಎಚ್.ಎಸ್.ಶಿವಪ್ರಕಾಶ್ ಮಾತನಾಡಿ, ಸಂಸದರಿಗೆ ಬಾಲ್ಯದಿಂದಲೂ ಸೇವಾ ಕಾರ್ಯಗಳನ್ನು ಮಾಡುವದೆಂದರೆ ಉತ್ಸಾಹ. ಸಾಮಾಜಿಕ ಕಳಕಳಿ ಎಂಬುದು ಅವರ ತಂದೆಯಿಂದಲೇ ಪಡೆದಿದ್ದಾರೆ. ಜನಪರ ಚಿಂತನೆಗಳನ್ನು ಅವರು ನಾಲ್ಕು ಅವಧಿಯ ಸಂಸದರಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳಿಂದಲೇ ಕಾಣಬಹುದು ಎಂದರು.

ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಬಿ.ಶಿವಕುಮಾರ್, ರೋಟರಿ ಕ್ಲಬ್ ಕಾರ್ಯದರ್ಶಿ ಹರೀಶ್, ನಾಗರಾಜ್, ರವೀಂದ್ರನಾಥ ಐತಾಳ್, ಆದರ್ಶ, ಆನಂದಮೂರ್ತಿ, ಕೆ.ಪಿ.ಶೆಟ್ಟಿ, ಎಂ.ಆರ್.ರಘು, ಮಧುಕೇಶ್ವರ, ಲಕ್ಷ್ಮಣ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net