ಈಗೇನಾದರೂ ಶ್ರೀನಗರಕ್ಕೆ ಹೋದರೆ ಮರಗಟ್ಟಿ ಹೋಗುತ್ತೀರಿ!; ಈ ಸೀಸನ್​ನಲ್ಲೇ ಇದುವರೆಗಿನ ಅತಿ ಕಡಿಮೆ ಉಷ್ಣಾಂಶ ದಾಖಲು!

Srinagar
Published on

ಶ್ರೀನಗರ: ಈಗ ಎಲ್ಲೆಡೆ ಚಳಿ ಆರಂಭವಾಗಿದೆ. ದೇಶದ ದಕ್ಷಿಣ ಭಾಗದಲ್ಲೇ ನಡುಕ ಹುಟ್ಟಿಸುವಷ್ಟು ಚಳಿ ಇದೆ. ಹೀಗಿರುವಾಗ ಉತ್ತರ ಭಾರತದಲ್ಲಿ ಅದರಲ್ಲೂ ದೇಶದ ತುತ್ತತುದಿಯಲ್ಲಿರುವ ಶ್ರೀನಗರದಲ್ಲಿ ಹೇಗಿರಬಹುದು ಎಂದು ಕೇಳುವ ಹಾಗಿಲ್ಲ. ಏಕೆಂದರೆ ಈಗೇನಾದರೂ ನೀವು ಅಲ್ಲಿಗೆ ಹೋದರೆ ಮರಗಟ್ಟಿ ಹೋಗುತ್ತೀರಿ!.

ಹೌದು.. ಶ್ರೀನಗರದಲ್ಲಿ ಈ ಸೀಸನ್​ನಲ್ಲಿ ಇದುವರೆಗಿನ ಅತಿ ಕಡಿಮೆ ಎಂಬಷ್ಟು ಕನಿಷ್ಠ ತಾಪಮಾನ ಶನಿವಾರ ವರದಿಯಾಗಿದೆ. ಅಂದರೆ ಶನಿವಾರದ ವರದಿ ಪ್ರಕಾರ ಶ್ರೀನಗರದಲ್ಲಿ ಕನಿಷ್ಠ ಉಷ್ಣಾಂಶ ಮೈನಸ್​ 6.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಡಿ. 17ರಂದು ಮೈನಸ್​ 6.4 ಡಿ.ಸೆ. ಇದ್ದ ಕನಿಷ್ಠ ತಾಪಮಾನ ಡಿ. 18ರಂದು ಮೈನಸ್​ 6.6ಕ್ಕೆ ಇಳಿದಿದೆ. ಇನ್ನು 2019ರ ಡಿ. 30 ಮತ್ತು 2016ರ ಡಿ. 21ರಂದು ಮೈನಸ್ 6.5 ಡಿ. ಸೆ. ಕನಿಷ್ಠ ತಾಪಮಾನ ವರದಿಯಾಗಿತ್ತು.

ಶ್ರೀನಗರದಲ್ಲಿ ಸಾಮಾನ್ಯವಾಗಿ ಡಿ. 21ರಿಂದ ಆರಂಭವಾಗಿ 40 ದಿನಗಳವರೆಗೆ ತೀವ್ರ ಚಳಿ ಇರುತ್ತದೆ. ಆದರೆ ಈಗಲೇ ಮೈನಸ್​ 6.6 ಡಿ.ಸೆ. ಕನಿಷ್ಠ ತಾಪಮಾನ ವರದಿ ಆಗಿರುವುದು, ಸದ್ಯದಲ್ಲೇ ಅದು ಇನ್ನೂ ಹೆಚ್ಚಿನ ಮಟ್ಟಕ್ಕೆ ಕುಸಿಯುವ ಸೂಚನೆ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net