ಕರೊನಾ ವಾಕ್ಸಿನ್ ಹಾಕಿಸಿಕೊಂಡ ನಂತರ ಈಕೆಯ ಧ್ವನಿ ಪುರುಷರ ಧ್ವನಿಯಂತಾಯ್ತು!

coronaq
Published on

ವಾಷಿಂಗ್ಟನ್​: ಕರೊನಾ ಲಸಿಕೆ ಬಳಕೆಗೆ ಸಿದ್ಧವಾಗಿದ್ದು, ಅಮೆರಿಕ ಈಗಾಗಲೇ ಲಸಿಕೆ ವಿತರಣೆ ಆರಂಭಿಸಿದೆ. ಆದರೆ ದೇಶದ ಅಲಾಸ್ಕಾದಲ್ಲಿ ಲಸಿಕೆ ಪಡೆದ ಇಬ್ಬರು ಸಿಬ್ಬಂದಿಯಲ್ಲಿ ಕೆಲವು ದುಷ್ಪರಿಣಾಮಗಳು ಕಂಡುಬಂದಿದೆ. ಓರ್ವ ಮಹಿಳಾ ಸಿಬ್ಬಂದಿಗೆ ಲಸಿಕೆ ನೀಡಲಾಗಿದ್ದು, ಲಸಿಕೆ ಪಡೆದ ನಂತರ ಆಕೆಯ ಧ್ವನಿ ಗಂಡಸಿನ ಧ್ವನಿಯಂತಾಗಿತ್ತು ಎಂದು ವರದಿ ಮಾಡಲಾಗಿದೆ.

ಅಲಾಸ್ಕಾದ ಮಹಿಳಾ ವೈದ್ಯಕೀಯ ಸಿಬ್ಬಂದಿಯೊಬ್ಬರು ಫೇರ್​ಬ್ಯಾಂಕ್​ ಆಸ್ಪತ್ರೆಯಲ್ಲಿ ಗುರುವಾರ ಎರಡು ಡೋಸೇಜ್ ಎಪಿನ್‌ಫ್ರಿನ್​​ ಲಸಿಕೆಯನ್ನು ಪಡೆದಿದ್ದಾರೆ. ಲಸಿಕೆ ಪಡೆದ ಕೆಲ ಸಮಯದಲ್ಲಿ ಆಕೆಗೆ ಅನಾಫಿಲ್ಯಾಕ್ಟಿಕ್ ರೋಗಲಕ್ಷಣಗಳು ಕಾಣಿಸಿಕೊಂಡಿವೆ. ಒರಟಾದ ಧ್ವನಿ, ನಾಲಿಗೇ ಊದುವುದು, ಉಸಿರಾಟ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಂಡಿವೆ. ಲಸಿಕೆ ಪಡೆದ ನಂತರ ಆರು ಗಂಟೆಗಳ ಕಾಲ ಆಕೆಯನ್ನು ಆಸ್ಪತ್ರೆಯಲ್ಲಿಯೇ ಇರಿಸಿಕೊಳ್ಳಲಾಗಿದ್ದು, ಅದಾದ ನಂತರ ವಾಪಾಸು ಕಳುಹಿಸಿಕೊಟ್ಟಿರುವುದಾಗಿ ತಿಳಿಸಲಾಗಿದೆ.

ಲಸಿಕೆ ಪಡೆಯುವವರಲ್ಲಿ ಅಲರ್ಜಿಯಂತಹ ದುಷ್ಪರಿಣಾಮ ಕಾಣಿಸಿಕೊಳ್ಳಬಹುದು. ಅದಕ್ಕೆಂದೇ ನಮ್ಮ ಸಿಬ್ಬಂದಿಯನ್ನು ತರಬೇತಿ ಕೊಟ್ಟು ತಯಾರಿ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ.

ನಾನು ಸಾಕಷ್ಟು ಕರೊನಾ ರೋಗಿಗಳನ್ನು ನೋಡಿದ್ದೇನೆ. ಅವರು ನರಳಾಡಿ ಸಾಯುವುದನ್ನು ಕಣ್ಣಾರೆ ಕಂಡಿದ್ದೇನೆ. ಅದಕ್ಕೆ ಹೋಲಿಸಿದರೆ ಲಸಿಕೆಯಿಂದಾಗುವ ತೊಂದರೆ ಲೆಕ್ಕಕ್ಕೇ ಬರುವುದಿಲ್ಲ. ಲಸಿಕೆ ಪಡೆಯುವುದು ಅವಶ್ಯಕ ಎಂದಿದ್ದಾರೆ ಲಸಿಕೆಯಿಂದಾಗಿ ಸಮಸ್ಯೆ ಎದುರಿಸಿರುವ ಸಿಬ್ಬಂದಿ.

ಲಸಿಕೆಯಿಂದ ದುಷ್ಪರಿಣಾಮ ಅನುಭವಿಸಿರುವ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆ ಅಲಾಸ್ಕಾದಲ್ಲಿಯೇ ವೈದ್ಯಕೀಯ ಸಿಬ್ಬಂದಿಯಲ್ಲಿ ಲಸಿಕೆ ಪಡೆದ ಕೆಲವೇ ಕ್ಷಣಗಳಲ್ಲಿ ಅನಾಫಿಲ್ಯಾಕ್ಟಿಕ್​ನ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net