

ನವದೆಹಲಿ: ಕೇಂದ್ರ ಜವಳಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಸೋಷಿಯಲ್ ಮೀಡಿಯಾದಲ್ಲಿ ಬಿಜಿ ಇರುತ್ತಾರೆ. ತಮ್ಮ ಅತೀವ ಕೆಲಸಗಳ ನಡುವೆಯೂ ಟ್ವಿಟರ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ತಮ್ಮ ತಮ್ಮ ಜೀವನದಿಂದ ಯಾವುದಾದರೂ ಮಾಹಿತಿಯನ್ನು ಶೇರ್ ಮಾಡಿಕೊಂಡು ಅಭಿಮಾನಿಗಳನ್ನು ಸಂತೋಷಪಡಿಸುತ್ತಿರುತ್ತಾರೆ.
ಇದಾಗಲೇ ನೂರಾರು ಮಾಹಿತಿಗಳನ್ನು ಸ್ಮೃತಿ ಹಂಚಿಕೊಂಡಿದ್ದಾರೆ.
ಆದರೆ ಇಂದು ಅವರು ಒಂದು ಸೆಲ್ಫಿ ತೆಗೆದು ಅದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಅದಕ್ಕೆ ನೇರವಾಗಿ ಕ್ಯಾಮೆರಾದತ್ತ ನೋಡುತ್ತಿರುವ, ಅತಿ ಹತ್ತಿರದಿಂದ ತೆಗೆದಿರುವ ಫೋಟೋ ಇದಾಗಿದೆ. ಯಾವುದೇ ಮೇಕಪ್ ಇಲ್ಲದೇ ಮನೆಯಲ್ಲಿ ಸಾಮಾನ್ಯವಾಗಿ ಇರುವಾಗಿನ ಫೋಟೋ ಇದಾಗಿದೆ. ಕೂದಲನ್ನು ತೋಳಿನ ಹಿಂಭಾಗದಲ್ಲಿ ಕಟ್ಟಿಹಾಕುವ ಮೂಲಕ ಸೆಲ್ಫೀ ತೆಗೆದು ಅದನ್ನು ಅಪ್‌ಲೋಡ್ ಮಾಡಿದ್ದಾರೆ.
ಆದರೆ ಸದಾ ಇವರ ಎಲ್ಲಾ ಫೋಟೋಗಳಿಗೆ ಹಾಗೂ ಅದಕ್ಕೆ ಸಚಿವೆ ನೀಡುವ ಕ್ಯಾಪ್ಷನ್‌ಗಳಿಗೆ ಹಾಡಿ ಹೊಗಳುತ್ತಿದ್ದ ಅಭಿಮಾನಿಗಳು ಈ ಸೆಲ್ಫಿಗೆ ನೀಡಿರುವ ಕ್ಯಾಪ್ಷನ್‌ಗೆ ಮಾತ್ರ ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಇದನ್ನು ನಂಬುವುದಿಲ್ಲ, ಇದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾರಣ, ಈ ಸೆಲ್ಫಿಗೆ ಸ್ಮೃತಿ ಇರಾನಿ ಅವರು ನೀಡಿರುವ ಕ್ಯಾಪ್ಷನ್ ಕೆದರಿರುವ ಕೂದಲು (disheveled). ಈ ಕ್ಯಾಪ್ಷನ್ ಸರಿಯಿಲ್ಲ ಎಂದು ಅಭಿಮಾನಿಗಳು ಹುಸಿಮುನಿಸು ಕೂಡ ತೋರಿಸಿದ್ದಾರೆ.
ಇದೇ ಸಮಯದಲ್ಲಿ ಸಚಿವೆ, ತಾವು ಓದಲು ಯೋಜಿಸುತ್ತಿರುವ ಪುಸ್ತಕವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಮಿಶ್ ತ್ರಿಪಾಠಿ ಅವರ ಸುಹೆಲ್ದೇವ್: ದಿ ಕಿಂಗ್ ಹೂ ಸೇವ್ ಇಂಡಿಯಾ ಪುಸ್ತಕದ ಮುಖಪುಟವನ್ನು ಅವರು ಹಂಚಿಕೊಂಡಿದ್ದಾರೆ. "ಓದುವುದನ್ನು ಎದುರು ನೋಡುತ್ತಿದ್ದೇನೆ’ ಎಂಬ ಶೀರ್ಷಿಕೆಯನ್ನು ಇದಕ್ಕೆ ಕೊಟ್ಟಿದ್ದಾರೆ.
ಇತ್ತೀಚೆಗೆ, ಇವರು ತಮ್ಮ ತಾಯಿಯ ಚಿತ್ರವನ್ನು ಇನ್ಸ್ಟಾಗ್ರಾಮ್ ಕಥೆಗಳಲ್ಲಿ ಹಂಚಿಕೊಂಡಿದ್ದರು. ತಾಯಿ ಶಿಬಾನಿ ಬಾಗ್ಚಿಯ ಸುಂದರವಾದ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ‘ಮಾ’ ಎನ್ನುವ ಶೀರ್ಷಿಕೆ ಕೊಟ್ಟಿದ್ದರು.
ಸ್ಮೃತಿ ಇರಾನಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 8.85 ಲಕ್ಷ ಪಾಲೋವರ್ಸ್‌ಗಳನ್ನು ಹೊಂದಿದ್ದಾರೆ, ಅವರು ಅವರಿಗೆ ತಮ್ಮ ಜೀವನದ ಕೆಲವೊಂದು ಸಂಗತಿಗಳನ್ನು ಶೇರ್ ಮಾಡುತ್ತಾರೆ.