More

    ಭಾರತದ ಅತ್ಯಂತ ಐಷಾರಾಮಿ ತಾಣ ಗೋವಾ ಇಂದಿನಿಂದ ದೇಸೀ ಪ್ರವಾಸಿಗರಿಗೆ ಮುಕ್ತ

    ಪಣಜಿ: ಭಾರತದ ಅತ್ಯಂತ ಆರಾಮದಾಯಕ ಹಾಗೂ ಐಷಾರಾಮಿ, ಪರಿಸರ ಸ್ನೇಹಿ ರಜಾತಾಣವೆಂದೇ ಹೆಸರುವಾಸಿಯಾದ ಗೋವಾ, ಲಾಕ್‌ಡೌನ್ ನಿಂದ ಉಂಟಾದ ಬೇಸರ ನೀಗಿಸಲು ‘ಪ್ರವಾಸಿಗರನ್ನು ನಿರ್ಮಲ ನಗೆಯಿಂದ ಆಹ್ವಾನಿಸುತ್ತಿದೆ.
    ಹೌದು, ದೇಸಿ ಪ್ರವಾಸಿಗರಿಗೆ ಜುಲೈ 2 ರಿಂದ ಗೋವಾ ತೆರೆದುಕೊಳ್ಳಲಿದೆ. ರಾಜ್ಯದಲ್ಲಿ 250 ಕ್ಕೂ ಹೆಚ್ಚು ಹೋಟೆಲ್‌ಗಳು ಪುನರಾರಂಭಗೊಳ್ಳಲಿವೆ ಎಂದು ಗೋವಾ ಪ್ರವಾಸೋದ್ಯಮ ಸಚಿವ ಮನೋಹರ್ ಅಜ್ಗಾಂವ್ಕರ್ ತಿಳಿಸಿದ್ದಾರೆ.

    ಈ ಹೋಟೆಲ್‌ಗಳಿಗೆ ರಾಜ್ಯ ಸರ್ಕಾರದ ಗುಣಮಟ್ಟದ ಕಾರ್ಯಾಚರಣಾ ವಿಧಾನಗಳೊಂದಿಗೆ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ನೀಡಲಾಗಿದೆ.
    “ದೇಶೀಯ ಪ್ರಯಾಣಿಕರು ಕೆಲವು ನಿಯಮಗಳೊಂದಿಗೆ ಜುಲೈ 2 ರಿಂದ ಗೋವಾಕ್ಕೆ ಪ್ರವೇಶಿಸಲು ಅನುಮತಿ ನೀಡಲು ನಾವು ನಿರ್ಧರಿಸಿದ್ದೇವೆ ಎಂದು ಅಜ್ಗಾಂವ್ಕರ್ ಹೇಳಿದರು.
    ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಇದನ್ನೂ ಓದಿ: ಸೋದರ ಮಾವನಿಂದಲೇ ಅತ್ಯಾಚಾರಕ್ಕೊಳಗಾದ 15ರ ಬಾಲಕಿ ಈಗ ಗರ್ಭಿಣಿ; ಆರೋಪಿ ಪರಾರಿ

    ರಾಜ್ಯಕ್ಕೆ ಬರುವ ಪ್ರವಾಸಿಗರು ಅನುಸರಿಸಬೇಕಾದ ಮಾರ್ಗಸೂಚಿಗಳೇನು?.
    1) ಪ್ರವಾಸಿಗರು 48 ಗಂಟೆಗಳ ಅವಧಿಯೊಳಗಿನ COVID-19 ನೆಗೆಟಿವ್ ಇರುವ ಪ್ರಮಾಣಪತ್ರವನ್ನು ಕೊಂಡೊಯ್ಯಬೇಕು ಅಥವಾ ರಾಜ್ಯದಲ್ಲಿ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಬೇಕು.
    2) ಪ್ರವಾಸಿಗರು ಬುಕ್ ಮಾಡಿದ ಹೊಟೆಲ್​ಗೆ ಕಳುಹಿಸಲಾಗುತ್ತದೆ. ಆದರೆ ಅವರನ್ನು ಪರೀಕ್ಷಿಸಿ, ಫಲಿತಾಂಶ ಬರುವವರೆಗೆ ಅವರು ಹೋಟೆಲ್‌ನಲ್ಲಿ ಇರಬೇಕಾಗುತ್ತದೆ.
    3) ಸೋಂಕು ದೃಢಪಟ್ಟರೆ ಅವರಿಗೆ ತಮ್ಮ, ರಾಜ್ಯಗಳಿಗೆ ಮರಳಲು ಅಥವಾ ಚಿಕಿತ್ಸೆಗಾಗಿ ಗೋವಾದಲ್ಲೇ ಉಳಿಯುವ ಎರಡು ಆಯ್ಕೆ ನೀಡಲಾಗುತ್ತದೆ.
    4) ಪ್ರವಾಸಿಗರು ಪ್ರವಾಸೋದ್ಯಮ ಇಲಾಖೆಯ ಅನುಮೋದನೆ ಪಡೆದ ಹೋಟೆಲ್‌ಗಳಿಗೆ ಕಡ್ಡಾಯವಾಗಿ ಮೊದಲೇ ಕಾಯ್ದಿರಿಸಬೇಕಾಗುತ್ತದೆ.
    5) ವ್ಯವಹಾರ ಪುನಾರಂಭಕ್ಕೆ ಇಲಾಖೆಯಲ್ಲಿ ನೋಂದಾಯಿಸದ ಹೊಟೆಲ್ ಮತ್ತು ಹೋಮ್​ಸ್ಟೇಗಳಿಗೆ ಪ್ರವಾಸಿಗರ ಪ್ರವೇಶ ಅಥವಾ ಆನ್​ಲೈನ್ ಬುಕಿಂಗ್ ಆರಂಭಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಅಜಗಾಂವ್ಕರ್ ತಿಳಿಸಿದ್ದಾರೆ.
    6) ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸದೆ, ಕೇವಲ ಆ್ಯಪ್ ಆಧಾರದ ಮೇಲೆ ಪ್ರವಾಸಿಗರಿಗೆ ವಾಸ್ತವ್ಯ ಸೌಲಭ್ಯಗಳನ್ನು ನೀಡುವ ಹೊಟೆಲ್ ಮತ್ತು ಅತಿಥಿ ಗೃಹಗಳ ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
    7) ನೋಂದಾಯಿಸದ ಹೊಟೆಲ್​​ಗಳಿಗೆ ಅಥವಾ ಅತಿಥಿಗೃಹಗಳಲ್ಲಿ ಆ್ಯಪ್ ಆಧಾರದ ಮೇಲೆ ಬುಕ್​ ಮಾಡಿ, ಕಾನೂನುಬಾಹಿರವಾಗಿ ವಾಸ್ತವ್ಯ ಹೂಡುವ ಪ್ರವಾಸಿಗರಿಗೆ ಅನುಮತಿ ನೀಡಲಾಗುವುದಿಲ್ಲ. ಅದನ್ನು ಕಾನೂನು ಬಾಹಿರ ಎಂದೇ ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

    ಒಂದು ರೂ.ಗೂ ಕಡಿಮೆ ಬೆಲೆಯ ಮಾತ್ರೆ ಕರೊನಾ ಚಿಕಿತ್ಸೆಯಲ್ಲಿ ಅದ್ಭುತಗಳನ್ನೇ ಮಾಡುತ್ತಿದೆ….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts