More

    ಮೂರು ತಿಂಗಳ ಭರ್ಜರಿ ಹನಿಮೂನ್‌ ಮುಗಿಸಿ ಅಂತೂ ಬಂದ ಈ ಜೋಡಿಯೀಗ ಸಕತ್‌ ಫೇಮಸ್‌!

    ದುಬೈ: ಮದುವೆಯಾಗಿ ಮೂರು ವಾರಗಳ ಹನಿಮೂನ್‌ಗೆ ಹೋಗಿದ್ದ ದಂಪತಿ ಮೂರು ತಿಂಗಳಾದರೂ ವಾಪಸಾಗದೇ ಹೋದಲ್ಲಿಯೇ ಇದ್ದು, ಅಂತೂ ಇದೀಗ ವಾಪಸ್‌ ಭಾರತಕ್ಕೆ ಕಾಲಿಟ್ಟಿದ್ದಾರೆ.

    ಈ ದಂಪತಿಯ ಹನಿಮೂನ್‌ ವಿಷ್ಯ ಭಾರಿ ಪ್ರಚಾರ ಗಿಟ್ಟಿಸಿಕೊಳ್ಳುವ ಜತೆ, ಈ ಜೋಡಿ ಇದೀಗ ಪ್ರಸಿದ್ಧರೂ ಆಗಿದ್ದಾರೆ.

    ಅಷ್ಟಕ್ಕೂ ಹನಿಮೂನ್‌ಗೆ ಹೋಗಿ ಬಂದರೆ ಅದರಲ್ಲೇನು ವಿಶೇಷ ಅಂತೀರಾ? ಇದು ಲಾಕ್‌ಡೌನ್‌ ಹನಿಮೂನ್‌ ಕಥೆ. ಮಾಲ್ಡ್‌ವೀಸ್‌ಗೆ ಹೋಗಿ ಮೂರೇ ವಾರದಲ್ಲಿ ಬರಬೇಕಾಗಿದ್ದ ಈ ಜೋಡಿ, ವಾಪಸ್‌ ಬರಲಾಗದೇ ಪೇಚಿಗೆ ಸಿಲುಕಿ ಅಂತೂ ಇದೀಗ ತವರಿಗೆ ಕಾಲಿಟ್ಟಿದ್ದಾರೆ.

    ಇದನ್ನೂ ಓದಿ: ಡಿಕೆಶಿ ಪಟ್ಟಾಭಿಷೇಕ ಆರಂಭದ ಕ್ಷಣ ಹೇಗಿತ್ತು?

    ಅಷ್ಟಕ್ಕೂ ಆಗಿದ್ದೇನೆಂದರೆ ರೋಹನ್‌ ಮತ್ತು ರಿಯಾ ಮಾರ್ಚ್‌ನಲ್ಲಿ ಮದುವೆಯಾಗಿದ್ದಾರೆ. ದುಬೈನಲ್ಲಿ ನೆಲೆಸಿರುವ ಮುಂಬೈ ವಾಸಿಯಾಗಿರುವ ಇವರು, ಲಾಕ್‌ಡೌನ್‌ಕ್ಕಿಂತ ಸ್ವಲ್ಪ ಮುಂಚೆ ಹನಿಮೂನ್‌ಗೆಂದು ಮಾಲ್ಡವೀಸ್‌ಗೆ ಹೋಗಿದ್ದರು. ಆದರೆ ಅಲ್ಲಿಂದ ಮರಳಬೇಕು ಅನ್ನುವಷ್ಟರಲ್ಲಿ ಭಾರತದಲ್ಲಿ ಕರೋನಾ ಲಾಕ್‌ಡೌನ್‌ ಆರಂಭವಾಯಿತು.

    ಲಾಕ್‌ಡೌನ್‌ ಅವಧಿಯಲ್ಲಿಯೇ ವಂದೇಭಾರತ್‌ ಯೋಜನೆಯಡಿ ಭಾರತ ಸರ್ಕಾರ ಬೇರೆ ಬೇರೆ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಿಮಾನದಲ್ಲಿ ಕರೆತಂದಿತು. ಆದರೆ ಈ ಜೋಡಿಗೆ ಆ ಅದೃಷ್ಟ ಇರಲಿಲ್ಲ. ಏಕೆಂದರೆ ರಿಯಾ ಕೆನಡಾ ಪಾಸ್‌ಪೋರ್ಟ್‌ ಹೊಂದಿರುವ ಕಾರಣ, ಅವರನ್ನು ಭಾರತಕ್ಕೆ ಕರೆತರಲು ಸಾಧ್ಯವಾಗಲಿಲ್ಲ.

    ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವೂ ಈ ಅವಧಿಯಲ್ಲಿ ನಡೆಯದ ಕಾರಣ, ಜೋಡಿ ಮೂರು ತಿಂಗಳಿನಿಂದ ಮಾಲ್ಡೀವ್ಸ್‌ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಇದೀಗ ವಿಶೇಷ ವಿಮಾನದಲ್ಲಿ ಆಗಮಿಸಲು ಭಾರತೀಯ ಮೂಲದವರಿಗೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ವಿಶೇಷ ವಿಮಾನದಲ್ಲಿ ದಂಪತಿ ಮುಂಬೈಗೆ ಆಗಮಿಸಿದ್ದಾರೆ.

    ಇನ್ನು ಮುಂಬೈನಲ್ಲಿ 14 ದಿನಗಳ ಕ್ವಾರಂಟೈನ್‌ ಬಳಿಕ ಜೋಡಿ ಮತ್ತೆ ದುಬೈಗೆ ತೆರಳಲಿದ್ದಾರೆ. ಅಂತೂ ಭರ್ಜರಿ ಸುದೀರ್ಘ ಹನಿಮೂನ್‌ ಮಾಡಿ ಸದ್ಯ ಸುದ್ದಿಯಲ್ಲಿದ್ದಾರೆ.

    50 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ ರಜೆ: ಇನ್ನೊಂದು ಇಲಾಖೆ ಸೇರ್ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts