ರಾಜ್ಯದಲ್ಲಿ ಚಳಿ ತುಸು ಹೆಚ್ಚಳ: ಕನಿಷ್ಠ ತಾಪಮಾನದಲ್ಲಿ 4-5 ಡಿ.ಸೆ. ಉಷ್ಣಾಂಶ ಇಳಿಮುಖ - Minimum temperatures drop by 4–5°C.

ಕಾರವಾರ, ಹೊನ್ನಾವರ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ರಾಯಚೂರು, ಕೊಪ್ಪಳ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಕನಿಷ್ಠ ತಾಪಮಾನದಲ್ಲಿ 4-5 ಡಿ.ಸೆ. ಇಳಿಮುಖವಾಗಿದೆ.
ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಕುಸಿತ
ರಾಜ್ಯದಲ್ಲಿ ಚಳಿ ಹೆಚ್ಚಳ
Published on: 

ಬೆಂಗಳೂರು: (Minimum temperatures drop by 4–5°C) ರಾಜ್ಯದ ಹಲವೆಡೆ ಚಳಿ ತುಸು ಜಾಸ್ತಿಯಾಗುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಉಷ್ಣಾಂಶ ಹೆಚ್ಚಳವಾದರೆ, ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಕುಸಿತವಾಗಿದೆ.

ಕಾರವಾರ, ಹೊನ್ನಾವರ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ರಾಯಚೂರು, ಕೊಪ್ಪಳ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಕನಿಷ್ಠ ತಾಪಮಾನದಲ್ಲಿ 4-5 ಡಿ.ಸೆ. ಇಳಿಮುಖವಾಗಿದೆ. ಇದರಿಂದಾಗಿ ರಾತ್ರಿ ಮತ್ತು ಮುಂಜಾನೆ ವೇಳೆ ಥಂಡಿ ವಾತಾವರಣ ಕಾಣಿಸಿಕೊಳ್ಳುತ್ತಿದೆ. ಜತೆಗೆ, ರಾತ್ರಿಯಲ್ಲಿಯೂ ಮಂಜಿನ ಹನಿಗಳಯ ಬೀಳುತ್ತಿವೆ.

Also Read
ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ರೊಮ್ಯಾಂಟಿಕ್ ರೈಡ್: ಇದು ರವಿಚಂದ್ರನ್ ಸಿನಿಮಾ ಶೈಲಿಯ ಡೇಂಜರಸ್ ಸವಾರಿ | Couple bike stunt
ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಕುಸಿತ

ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ಮೋಡ ಮುಸುಕಿದ ವಾತಾವರಣ ಇದ್ದಾಗ ಚಳಿ ಇರುವುದಿಲ್ಲ. ಆದರೆ, ರಾಜ್ಯದಲ್ಲಿ ಪ್ರಸ್ತುತ ಶುಭ್ರ ವಾತಾವರಣ ಇದೆ. ಈ ಕಾರಣದಿಂದ ಚಳಿ ಜಾಸ್ತಿಯಾಗಿದೆ. ಪ್ರಸ್ತುತ ಹವಾಮಾನ ಸ್ಥಿತಿಯನ್ನು ಅವಲೋಕಿಸಿದರೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಲಕ್ಷಣ ಗೋಚರಿಸುತ್ತಿದೆ. ಮುಂದಿನ 3 ದಿನದಲ್ಲಿ ವಾಯುಭಾರ ಕುಸಿತವಾಗಲಿದೆ. ಇದರ ಪರಿಣಾಮದಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಸೈಕ್ಲೋನ್ ರೂಪುಗೊಳ್ಳುವ ಕುರಿತು ಇನ್ನೂ ನಿಖರ ಮಾಹಿತಿ ಸಿಕ್ಕಿಲ್ಲ ಎಂದರು.