ಮಹಾಂತ ನೃತ್ಯ ಗೋಪಾಲ ದಾಸರ ಆರೋಗ್ಯದಲ್ಲಿ ಕೊಂಚ ಚೇತರಿಕೆ

Mahant Nritya Gopal Das
Published on

ಲಖನೌ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇಥ್ರ ಟ್ರಸ್ಟ್ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ ದಾಸ (84) ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಇದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇಂದು ಅಪರಾಹ್ನ ಆಸ್ಪತ್ರೆಗೆ ಭೇಟಿ ನೀಡಿ ಮಹಾಂತ ಅವರ ಆರೋಗ್ಯ ವಿಚಾರಿಸಿದ್ದಾರೆ. ಒಂದರ್ಧ ಗಂಟೆ ಅವರ ಜತೆಗೆ ಇದ್ದರು ಎಂದು ಮೇದಾಂತ ಹಾಸ್ಪಿಟಲ್​ನ ನಿರ್ದೇಶಕ ಡಾಕ್ಟರ್ ರಾಕೇಶ್ ಕಪೂರ್ ಮಂಗಳವಾರ ತಿಳಿಸಿದ್ದಾರೆ.

ವೈದ್ಯರ ತಂಡ ಮಹಾಂತ ಅವರ ಆರೋಗ್ಯದ ಮೇಲೆ ನಿಗಾವಹಿಸಿದ್ದು, ಕೊಂಚ ಚೇತರಿಕೆ ಇದೆ. ಉಸಿರಾಟದ ಸಮಸ್ಯೆ ಕೊಂಚ ಕಡಿಮೆಯಾಗಿದೆ. ರಕ್ತ ಹೆಪ್ಪುಗಟ್ಟಿರುವ ವಿಚಾರದ ಬಗ್ಗೆ ಡಾಕ್ಟರ್​ಗಳು ಗಮನಹರಿಸಿದ್ದಾರೆ. ಅವರ ಮೂತ್ರಕೋಶಗಳ ಕಾರ್ಯದ ಮೇಲೂ ನಿಗಾವಹಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾಕ್ಟರ್ ಕಪೂರ್ ತಿಳಿಸಿದ್ದಾರೆ.

ಮಹಾಂತ ಅವರನ್ನು ತ್ರೋಂಬೋಎಂಬೋಲಿಸಂ ಚಿಕಿತ್ಸೆಗಾಗಿ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಅಪರಾಹ್ನ ಮೇದಾಂತಕ್ಕೆ ದಾಖಲಿಸಲಾಗಿದ್ದು, ಅದಕ್ಕೂ ಮೊದಲು ಮಹಾಂತ ಅವರಿಗೆ ಅಯೋಧ್ಯೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net