ಇಮಾಮ್​ಗಂಜ್​ನಲ್ಲಿ ಜಿತನ್ ರಾಮ್​, ಹಸನ್​ಪುರನಲ್ಲಿ ತೇಜ್​ ಪ್ರತಾಪ್​ ಗೆಲುವಿನ ನಗೆ

Jitan ram tej pratap
Published on

ಪಟನಾ: ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಹಿಂದುಸ್ತಾನಿ ಅವಾಂ ಮೋರ್ಚಾ ಅಧ್ಯಕ್ಷ ಜಿತನ್ ರಾಮ್ ಮಾಂಜಿ ಇಮಾಮ್​ ಗಂಜ್​ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಇದೇ ವೇಳೆ, ಹಸನ್​ಪುರ ಕ್ಷೇತ್ರದಲ್ಲಿ ಆರ್​ಜೆಡಿ ನಾಯಕ ತೇಜ್​ ಪ್ರತಾಪ್ ಯಾದವ್ ಗೆಲುವು ಕಂಡಿದ್ದಾರೆ.

ಇಮಾಮ್​ಗಂಜ್​ನಲ್ಲಿ ಮಾಂಜಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಆರ್​ಜೆಡಿಯ ಉದಯ್ ನಾರಾಯಣ್​ ಚೌಧರಿ ಅವರನ್ನು 16,034 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಮಾಂಜಿ ಅವರ ಪಕ್ಷ ಎನ್​ಡಿಎ ಮೈತ್ರಿಕೂಟದಲ್ಲಿದೆ. ಮಾಂಜಿ ಈ ಹಿಂದೆ ಬಿಹಾರದ ಮುಖ್ಯಮಂತ್ರಿಯೂ ಆಗಿದ್ದರು. 1980ರ ದಶಕದಿಂದ ಅನೇಕ ಸಲ ಮಾಂಜಿ ವಿಧಾನಸಭೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಹಸನ್​ಪುರ ಕ್ಷೇತ್ರದಲ್ಲಿ ತೇಜ್ ಪ್ರತಾಪ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಯುನ ರಾಜ್ ಕುಮಾರ್ ರಾಯ್ ಅವರನ್ನು 21,139 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ತೇಜ್ ಪ್ರತಾಪ್ ಯಾದವ್ ತಮ್ಮ ಹಿಂದಿನ ಕ್ಷೇತ್ರ ವೈಶಾಲಿಯ ಮಹುವಾ ಕ್ಷೇತ್ರವನ್ನು ಬಿಟ್ಟು ಈ ಬಾರಿ ಸಮಸ್ಟಿಪುರ ಜಿಲ್ಲೆಯ ಹಸನ್​ಪುರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಗೆಲುವು ಕಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net