ಎಸ್‌ಜೆಆರ್ ಕಾಲೇಜು ಜಿಲ್ಲಾ ಮಟ್ಟಕ್ಕೆ

bhr sjr
ತಾಲೂಕು ಮಟ್ಟದ ಪಿಯು ಕಾಲೇಜು ಕ್ರೀಡಾಕೂಟದಲ್ಲಿ ವಿವಿಧ ಪ್ರಶಸ್ತಿ ಪಡೆದ ಬಾಳೆಹೊನ್ನೂರಿನ ಎಸ್‌ಜೆಆರ್ ಪಿಯು ಕಾಲೇಜಿನ ವಿದ್ಯಾರ್ಥಿಗಳು. ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಸಿ.ಗೀತಾ, ಪ್ರಾಚಾರ್ಯ ಕೆ.ಆರ್.ಬೂದೇಶ್ ಮತ್ತು ಉಪನ್ಯಾಸಕರಿದ್ದಾರೆ.
Published on

ಬಾಳೆಹೊನ್ನೂರು: ಎನ್.ಆರ್.ಪುರ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಎಸ್‌ಜೆಆರ್ ಪಿಯು ಕಾಲೇಜು ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಾಚಾರ್ಯ ಕೆ.ಆರ್.ಬೂದೇಶ್ ತಿಳಿಸಿದ್ದಾರೆ.

ಶಾಟ್‌ಪಟ್, ಜಾವೆಲಿನ್, ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಎನ್.ಸಂದೇಶ್ ಪ್ರಥಮ ಬಹುಮಾನ ಪಡೆದು ಬಾಲಕರ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ. ಎನ್.ನೇಹಾ 100 ಮೀ., 200 ಮೀ. ಹಾಗೂ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ನಾಗಿ ಹೊರಹೊಮ್ಮಿದ್ದಾಳೆ.
ಬಾಲಕಿಯರ ವಿಭಾಗ : 200 ಮೀ. ಓಟ- ಅನ್ವಿತಾ (ದ್ವಿ), 1500, 3000 ಮೀ. ಓಟ- ಡಿ.ಎಲ್.ಪ್ರೀತಿ (ತೃ), 5000 ಮೀ. ಓಟ - ಶಿಲ್ಪಾ (ದ್ವಿ) ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗ: 800 ಮೀ. ಓಟ ಚರಣ್ (ಪ್ರ), 1500, 5000 ಮೀ. - ನವಾಜ್ (ದ್ವಿ), ಹ್ಯಾಮರ್ ಥ್ರೋ - ಸುಮನ್ (ಪ್ರ), ಜಾವೆಲಿನ್- ಸುದರ್ಶನ್ (ದ್ವಿ), ಹೈ ಜಂಪ್, ಲಾಂಗ್ ಜಂಪ್- ಸಂಜಯ್ (ದ್ವಿ), ಟ್ರಿಪಲ್ ಜಂಪ್- ಬಿ.ಎಸ್.ಅರವಿಂದ್ (ಪ್ರ), ಜೀವನ್ (ತೃ), 400, 100 ಮೀ. ಹರ್ಡಲ್ಸ್ - ಅರವಿಂದ್ (ಪ್ರ), ಗುಡ್ಡಗಾಡು ಓಟ- ಧನುಷ್, ಸುನೀಲ್ (ಜಿಲ್ಲಾ ಮಟ್ಟಕ್ಕೆ ಆಯ್ಕೆ).
ಗುಂಪು ಆಟದಲ್ಲಿ ಬಾಲಕರ ವಿಭಾಗದ ವಾಲಿಬಾಲ್, ಥ್ರೋಬಾಲ್ ತಂಡ ಪ್ರಥಮ ಸ್ಥಾನ, ಬಾಲಕಿಯರ ವಿಭಾಗದ ಬಾಲ್ ಬ್ಯಾಡ್ಮಿಂಟನ್ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿವೆ. ರಿಲೇಯಲ್ಲಿ ಬಾಲಕ, ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net