ಐಸಿಎಂಆರ್ ಮೇಲೆ 6 ಸಾವಿರ ಸೈಬರ್ ದಾಳಿ! ಸುರಕ್ಷತಾ ಕ್ರಮ ಅಳವಡಿಸಿಕೊಂಡಿದ್ದರಿಂದ ಯತ್ನ ವಿಫಲ

566
Published on

ನವದೆಹಲಿ: ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ (ಏಮ್್ಸ) ಸರ್ವರ್ ಮೇಲೆ ರ್ಯಾನ್​ಸಮ್ೇರ್ ದಾಳಿ ನಡೆಸಿದ ಹ್ಯಾಕರ್​ಗಳು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವೆಬ್​ಸೈಟ್ ಮೇಲೆ ನವೆಂಬರ್​ನಲ್ಲಿ ಆರು ಸಾವಿರ ಬಾರಿ ದಾಳಿ ಪ್ರಯತ್ನ ನಡೆಸಿದ್ದರೆಂಬುದು ಈಗ ಬಯಲಾಗಿದೆ. ಕಪು್ಪಪಟ್ಟಿಗೆ ಸೇರಿರುವ ಹಾಂಕಾಂಗ್ ಮೂಲಕದ ಹ್ಯಾಕರ್​ಗಳ ಐಪಿ ವಿಳಾಸ ದಾಳಿಗೆ ಯತ್ನಿಸಿತ್ತು. ಆದರೆ, ಐಸಿಎಂಆರ್ ಸಂಭಾವ್ಯ ದಾಳಿಗಳಿಂದ ತಪ್ಪಿಸಿಕೊಳ್ಳುವ ಸುರಕ್ಷತಾ ಕ್ರಮಗಳನ್ನು (ಫೈರ್​ವಾಲ್) ಅಳವಡಿಸಿ ಕೊಂಡಿದ್ದರಿಂದ ಹ್ಯಾಕರ್​ಗಳ ಪ್ರಯತ್ನ ಫಲಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

ಹತ್ತು ದಿನದ ಹಿಂದೆ ಏಮ್ಸ್​ನ ಪ್ರಧಾನ ಸರ್ವರ್ ಹ್ಯಾಕ್ ಮಾಡಿರುವವರು 200 ಕೋಟಿ ರೂಪಾಯಿಗಳನ್ನು ಕ್ರಿಪ್ಟೊಕರೆನ್ಸಿ ಮೂಲಕ ಪಾವತಿಸುವಂತೆ ಬೇಡಿಕೆ ಇರಿಸಿದ್ದಾರೆ. ಸರ್ವರ್​ಗಳು ಹ್ಯಾಕ್ ಆಗಿರುವುದರಿಂದ ಏಮ್ಸ್​ನ ಎಲ್ಲ ಕಾರ್ಯಗಳು ಮಾನವಶ್ರಮದ ಮೂಲಕ ನಡೆಯುತ್ತಿದೆ. ಏಮ್್ಸ ಎದುರಿಗೆ ಇರುವ ಸಫ್ದಾರ್​ಜಂಗ್ ಆಸ್ಪತ್ರೆಯ ಸರ್ವರ್ ಮೇಲೂ ಡಿ. 4ರಂದು ಸೈಬರ್ ದಾಳಿ ನಡೆದಿದೆ. ಆದರೆ, ಏಮ್ಸ್​ಗೆ ಆಗಿರುವಷ್ಟು ದೊಡ್ಡ ಮಟ್ಟದ ಹಾನಿ ಆಗಿಲ್ಲ.

ಅಮೆರಿಕದ ಕೋವಿಡ್ ಫಂಡ್​ಗೆ ಕನ್ನ: ಚೀನಾ ಸರ್ಕಾರದ ಜತೆ ಸಂಬಂಧ ಹೊಂದಿರುವ ‘ಎಪಿಟಿ41’ ಗುಂಪು ಅಮೆರಿಕದ ಕೋವಿಡ್ ಪರಿಹಾರ ನಿಧಿಗೆ ಕನ್ನ ಹಾಕಿ 20 ದಶಲಕ್ಷ ಡಾಲರ್ ದೋಚಿರುವ ಪ್ರಕರಣ ನಡೆದಿದೆ. ಕೋವಿಡ್​ನಿಂದ ಸಂತ್ರಸ್ತರಾದ ಸಣ್ಣ ವ್ಯಾಪಾರಿಗಳು, ನಿರುದ್ಯೋಗಿಗಳಾದವರಿಗೆ ಸಾಲ ಮತ್ತು ನೆರವು ನೀಡಲು ಈ ನಿಧಿ ಸ್ಥಾಪಿತವಾಗಿತ್ತು. ಅಮೆರಿಕದ ಸುಮಾರು 12 ರಾಜ್ಯಗಳಲ್ಲಿ ಸ್ಥಾಪಿತವಾಗಿದ್ದ ನಿಧಿಗೆ 2020ರ ಮಧ್ಯಭಾಗದಲ್ಲಿ ಕನ್ನ ಹಾಕಿದ ಸೈಬರ್ ಕಳ್ಳರು, ಎರಡು ಸಾವಿರ ಖಾತೆಗಳ ಮೂಲಕ 40 ಸಾವಿರ ವಹಿವಾಟು ನಡೆಸಿದ್ದಾರೆ.

ಕೋವಿಡ್ ಸಂತಸ್ತರಿಗಾಗಿದ್ದ ನಿಧಿಯನ್ನು ದೋಚುತ್ತಿರುವ ಬಗ್ಗೆ ಹಲವು ಸಂಸ್ಥೆಗಳು ತನಿಖೆ ನಡೆಸಿದ್ದವು. ಈ ಸೈಬರ್ ಕ್ರೖೆಮ್ಲ್ಲಿ ವಿದೇಶದ ಹ್ಯಾಕರ್​ಗಳ ಪಾತ್ರ ಇರುವುದಾಗಿ ಬೆಟ್ಟು ಮಾಡಿ ದ್ದವು. ಮತ್ತಷ್ಟು ವಿವರವಾದ ತನಿಖೆ ನಡೆದಾಗ ಇದು ಚೀನಾದ ಚೆಂಗ್ಡು ಮೂಲದ ಹ್ಯಾಕಿಂಗ್ ಗುಂಪಿನ ಮೇಲೆ ಸಂಶಯ ಹೆಚ್ಚಿಸಿತು. ಇದು ಚೀನಾ ಸರ್ಕಾರದ ಜತೆಗೆ ನಂಟು ಹೊಂದಿದ್ದು, ಅನೇಕ ದೇಶಗಳು ಈ ಗುಂಪಿನ ಬಗ್ಗೆ ಭದ್ರತಾ ಕಳವಳವನ್ನು ಹೊಂದಿವೆ ಎಂಬುದು ತಿಳಿದುಬಂತು.

‘ಸೈಬರ್ ಖದೀಮರು ಅಮೆರಿಕದ ಎಲ್ಲ 50 ರಾಜ್ಯಗಳ ನಿಧಿಯನ್ನು ಗುರಿಯಾಗಿಟ್ಟುಕೊಂಡಿಲ್ಲ. ಅವರು ಒಂದು ಡಜನ್ ರಾಜ್ಯಗಳನ್ನೇಕೆ ಆಯ್ದುಕೊಂಡರು ಎಂಬುದು ಸೋಜಿಗ’ ಎಂದು ರಾಷ್ಟ್ರೀಯ ಸಾಂಕ್ರಾಮಿಕದ ವಂಚನೆಯ ವಸೂಲಾತಿ ಸಂಯೋಜಕ ರಾಯ್ ಡಾಟ್ಸನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net