ವೇಗವಾಗಿ ಬಂದ ಕಾರಿಗೆ ಆಟೋ ರಿಕ್ಷಾ ಡಿಕ್ಕಿ: ಚಾಲಕನ ತಪ್ಪಿಗೆ ಪ್ರಾಣ ತೆತ್ತ 6 ಜನ

car accident (1)
ಸಾಂದರ್ಭಿಕ ಚಿತ್ರ
Published on

ಆಗ್ರಾ: ವೇಗವಾಗಿ ಬಂದ ಕಾರಿಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರಾದ ಖೇರಘರ್ ಬಳಿ ನಡೆದಿದೆ.

ಸೋಮವಾರ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಮೃತರನ್ನು ಜಯಪ್ರಕಾಶ್, ಸುಮಿತ್, ಬ್ರಜೇಶ್ ದೇವಿ, ಬ್ರಜ್ಮೋಹನ್ ಶರ್ಮಾ, ಮನೋಜ್ ಶರ್ಮಾ ಮತ್ತು ಆಟೋ ರಿಕ್ಷಾ ಚಾಲಕ ಭೋಲಾ ಎಂದು ಗುರುತಿಸಲಾಗಿದೆ.

ಈ ಕುರಿತು ಮಾತನಾಡಿದ ಪೊಲೀಸರು, ಮೇಲ್ನೋಟಕ್ಕೆ ಕಾರು ಚಾಲಕ ಮದ್ಯದ ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು, ಸ್ನೇಹಿತರನ್ನು ಬಿಟ್ಟು ಮನೆಗೆ ಹಿಂದಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತದ ಪರಿಣಾಮವಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಸತ್ತಿದ್ದಾರೆ ಎಂದು ಹೇಳಿದ್ದಾರೆ. 

ಘಟನೆಯ ಬಳಿಕ ಕಾರಿನ ಚಾಲಕ ಪರಾರಿಯಾಗಿದ್ದಾನೆ ಆದರೆ ಆತನ ಇಬ್ಬರು ಸಹಾಯಕರಾದ ಪಿಂಕು ಮತ್ತು ಬನಿಯಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ರಾಜೀವ್ ಕುಮಾರ್ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net