ಕಬ್ಬು ತುಂಬಿದ್ದ ಟ್ಯಾಕ್ಟರ್​ಗೆ Car ಡಿಕ್ಕಿ; ಒಂದೇ ಕುಟುಂಬದ ಆರು ಮಂದಿ ಸಾವು, ಮೂವರು ಗಂಭೀರ

Road Accident
Published on

ನವದೆಹಲಿ: ಕಬ್ಬು ತುಂಬಿದ್ದ ಟ್ಯಾಕ್ಟರ್​ಗೆ ಕಾರೊಂದು (Car) ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ತಾಂಡಿಯನ್‌ವಾಲಾದಲ್ಲಿನಡೆದಿದೆ.ಲಾಹೋರ್​ನಿಂದ ತಾಂಡಿಯನ್‌ವಾಲಾಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದ್ದು, ಅಪಘಾತ ಸಂಬಂಧ ಪೊಲೀಸರು ಟ್ಯಾಕ್ಟರ್​ಅನ್ನು ವಶಕ್ಕೆ ಪಡೆದಿದ್ದಾರೆ. 

ಘಟನೆ ಕುರಿತು ಮಾತನಾಡಿರುವ ಸ್ಟೇಷನ್​ ಹೌಸ್​ ಅಧಿಕಾರಿಯೊಬ್ಬರು, ನಸುಕಿನ ಜಾವ ಅಪಘಾತ ಸಂಭವಿಸಿದ್ದು, ದಟ್ಟವಾದ ಮಂಜು ತುಂಬಿದ್ದ ಕಾರಣ ರಸ್ತೆ ಸರಿಯಾಗಿ ಕಾಣಿಸದೆ ಅಪಘಾತ ಸಂಭವಿಸಿದೆ. ಕಬ್ಬು ತುಂಬಿದ್ದ ಟ್ಯಾಕ್ಟರ್​ಗೆ ಕಾರು ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಮಕ್ಕಳು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಲಾಹೋರ್ ಮೂಲದ ಕುಟುಂಬವು ತಾಂಡಿಯನ್‌ವಾಲಾಗೆ ಪ್ರಯಾಣಿಸುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು, ಅಪಘಾತದ ಬಳಿಕ ಟ್ಯಾಕ್ಟರ್​ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಚಾಲಕನನ್ನು ಪತ್ತೆ ಹಚ್ಚಲು ತಂಡವನ್ನು ರಚಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸ್ಟೇಷನ್​ ಹೌಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net