ಪಾಕ್​ನಲ್ಲಿ ಬಾಂಬ್​ ದಾಳಿ; 6 ಮಂದಿ ಸಾವು

Baluchistan
Published on

ಇಸ್ಲಮಾಬಾದ್​: ಪಾಕಿಸ್ತಾನ ಸರ್ಕಾರದ ಫೆಡರಲ್​ ಕಾರ್ಯನಿರ್ವಾಹಕ ದಳವಾದ ಮಾದಕ ವಸ್ತು ವಿರೋಧಿ ಪಡೆ (ಎಎನ್​ಎಫ್​) ಯನ್ನು ಗುರಿಯಾಗಿಸಿಕೊಂಡು ನಡೆಸಲಾದ ಸುಧಾರಿತ ಬಾಂಬ್ ದಾಳಿಗೆ 6 ಮಂದಿ ಬಲಿಯಾಗಿದ್ದಾರೆ.

ನೈಋತ್ಯ ಬಲೂಚಿಸ್ತಾನದ ಅಫ್ಘಾನಿಸ್ತಾನದ ಗಡಿ ಪಟ್ಟಣವಾದ ಚಮನ್​​ನಲ್ಲಿ ಎಎನ್​ಎಫ್ ಸಿಬ್ಬಂದಿಯನ್ನೊಳಗೊಂಡ ವಾಹನದ ಮೇಲೆ ಬಾಂಬ್ ದಾಳಿ ನಡೆದಿದೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಅಲ್ಲದೆ 10 ಮಂದಿಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ರಿಯಾ ಆದಾಯಕ್ಕೂ ಆಸ್ತಿಗೂ ತಾಳೆಯಾಗುತ್ತಿಲ್ಲ…! ದುಡ್ಡಿನ ಮೂಲ ಹುಡುಕುತ್ತಿದೆ ಜಾರಿ ನಿರ್ದೇಶನಾಲಯ

ಈ ದಾಳಿಯ ಹೊಣೆಯನ್ನು ಇನ್ನೂ ಯಾವುದೇ ಉಗ್ರಸಂಘಟನೆಗಳಾಲಿ, ಇನ್ಯಾರಾಗಲೀ ಹೊತ್ತುಕೊಂಡಿಲ್ಲ. ಆದರೆ ಬಲೂಚ್​ ಪ್ರತ್ಯೇಕತಾವಾದಿಗಳು ವರ್ಷಗಳಿಂದಲೂ ಇಲ್ಲಿ ದಂಗೆಯನ್ನು ನಡೆಸುತ್ತಿದ್ದಾರೆ.

ಇಂಥ ದಾಳಿಗಳನ್ನು ಜನರಲ್ಲಿ ಭಯ ಬಿತ್ತಲು ಮಾಡಲಾಗುತ್ತದೆ ಎಂದು ಪಾಕ್​ ಸಚಿವ ಇಜಾಜ್ ಷಾ ತಿಳಿಸಿದ್ದಾರೆ. ಸದ್ಯ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net