ಮಾಧ್ಯಮಗಳು ಸುಶಾಂತ್ ಸಾವಿಗೆ ನಾನೇ ಕಾರಣ ಎಂದು ಬಿಂಬಿಸುತ್ತಿವೆ; ಸುಪ್ರೀಂಗೆ ರಿಯಾ ಕಡೆಯಿಂದ ಅರ್ಜಿ

Untitled
Published on

ಈಗಾಗಲೇ ಹಲವು ವಿಚಾರಗಳಿಂದ ಸದ್ದು ಮಾಡುತ್ತಿರುವ ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ, ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಅದರಲ್ಲೂ ರಿಯಾ ವಿರುದ್ಧ ದೂರು ದಾಖಲಾದ ಮೇಲೆ ಪ್ರಕರಣ ಮತ್ತಷ್ಟು ಗಂಭೀರತೆ ಪಡೆದುಕೊಂಡಿದೆ. ಹೀಗಿರುವಾಗ ವಿಚಾರಣೆ ವೇಳೆಯೇ ಮತ್ತೊಮ್ಮೆ ಸುಪ್ರೀಂ ಮೆಟ್ಟಿಲೇರಿದ್ದಾರೆ ರಿಯಾ ಚಕ್ರವರ್ತಿ.

ಸೋಮವಾರ, ಸುಪ್ರೀಂಗೆ ಅರ್ಜಿ ಸಲ್ಲಿಸಿರುವ ರಿಯಾ, ‘ಮಾಧ್ಯಮಗಳು ಸುಶಾಂತ್​ ಸಾವಿಗೆ ನಾನೇ ಕಾರಣ ಎಂಬಂಥ ರೀತಿಯಲ್ಲಿ ಬಿಂಬಿಸುತ್ತಿವೆ. ನನ್ನನ್ನೇ ತಪ್ಪಿತಸ್ಥೆ ರೂಪದಲ್ಲಿ ನೋಡುತ್ತಿದ್ದಾರೆ. ನನ್ನನ್ನೇ ಟಾರ್ಗೇಟ್​ ಮಾಡುತ್ತಿವೆ‘ ಎಂದು ಅರ್ಜಿಯಲ್ಲಿ ದೂರಿದ್ದಾರೆ.

ಅಷ್ಟೇ ಅಲ್ಲ ಇತ್ತೀಚೆಗಷ್ಟೇ ಹಿಂದಿ ಕಿರುತೆರೆಯ ಇಬ್ಬರು ಕಲಾವಿದರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಬಗ್ಗೆಯೂ ಅರ್ಜಿಯಲ್ಲಿ ನಮೂದಿಸಿದ್ದಾರೆ. ‘ಸುಶಾಂತ್​ ಆತ್ಮಹತ್ಯೆ ಬಳಿಕ ಕಳೆದ 30 ದಿನಗಳ ಅವಧಿಯಲ್ಲಿ ನಟರಾದ ಅಶುತೋಷ್​ ಭಕ್ರೆ ಮತ್ತು ಸಮೀರ್ ಶರ್ಮಾ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿನ ಬಗ್ಗೆ ಪಿಸುಮಾತಿಲ್ಲ. ಅವರ ಸಾವಿಗೆ ಕಾರಣವೇನು ಎಂಬ ಬಗ್ಗೆ ಪೊಲೀಸ್​ ಇಲಾಖೆ ತನಿಖೆ ನಡೆಸುತ್ತಿಲ್ಲ. ಇದೆಲ್ಲವನ್ನು ಬಿಟ್ಟು ಸುಶಾಂತ್​ ಸಾವನ್ನೇ ಪ್ರಧಾನವಾಗಿಸಿಕೊಂಡಿದ್ದೀರಿ’ ಎಂದಿದ್ದಾರೆ.

ಈ ಮೊದಲು ಬಿಹಾರದಲ್ಲಿ ಸುಶಾಂತ್​ ತಂದೆ ಕೆಕೆ ಸಿಂಗ್​ ರಿಯಾ ವಿರುದ್ಧ ದೂರು ನೀಡಿದ್ದರು. ಆ ಪ್ರಕರಣವನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು ರಿಯಾ. ಇದೀಗ ಮತ್ತೊಮ್ಮೆ ಸುಪ್ರೀಂ ಮೆಟ್ಟಿಲೇರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net