More

    ಒಂದು ವರ್ಷ ಮುಂದಕ್ಕೆ ಹೋಯ್ತು ಅಮೀರ್​ ಖಾನ್​ ಹೊಸ ಸಿನಿಮಾ ಬಿಡುಗಡೆ

    ಅಮೀರ್​ ಖಾನ್​ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಎರಡು ವರ್ಷಗಳೇ ಆಗಿವೆ. 2018ರ ಡಿಸೆಂಬರ್​ನಲ್ಲಿ ಬಿಡುಗಡೆಯಾದ ‘ಥಗ್ಸ್​ ಆಫ್​ ಹಿಂದೂಸ್ಥಾನ್​’ ಚಿತ್ರವೇ ಕೊನೆ. ಆ ನಂತರ ಅಮೀರ್​ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ.

    ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಅಮೀರ್​ ಅಭಿನಯದ ಹೊಸ ಚಿತ್ರ ‘ಲಾಲ್​ ಸಿಂಗ್​ ಛಡ್ಡಾ’, ಈ ವರ್ಷದ ಕೊನೆಗೆ, ಕ್ರಿಸ್ಮಸ್​ ಹೊತ್ತಿಗೆ ಬಿಡುಗಡೆಯಾಗಿದೆ. ಈಗ ಬಂದಿರುವ ಸುದ್ದಿಯ ಪ್ರಕಾರ, ಈ ಚಿತ್ರ ಅನಾಮತ್ತು ಒಂದು ವರ್ಷ ಮುಂದಕ್ಕೆ ಹೋಗಿದೆ. ಅಂದರೆ, ಈ 2020ರ ಕ್ರಿಸ್ಮಸ್​ಗೆ ಬಿಡುಗಡೆಯಾಗಬೇಕಿದ್ದ ಈ ಚಿತ್ರ, 2021ರ ಕ್ರಿಸ್ಮಸ್​ಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ನಂಗೇನೂ ಆಗಿಲ್ಲ, ಸುಮ್ನೆ ಖುಷಿಪಡಬೇಡಿ … ಆರ್​ಜಿವಿ ಹೀಗೆ ಹೇಳಿದ್ದ್ಯಾಕೆ?

    ಹಾಲಿವುಡ್​ ಚಿತ್ರ ‘ಫಾರೆಸ್ಟ್​ ಗಂಪ್​’ನಿಂದ ಸ್ಫೂರ್ತಿ ಪಡೆದ ‘ಲಾಲ್​ ಸಿಂಗ್ ಚಡ್ಢಾ’ದ ಚಿತ್ರೀಕರಣ ಈ ವರ್ಷದ ಆರಂಭದಲ್ಲೇ ಶುರುವಾಗಿತ್ತು. ಆದರೆ, ಲಾಕ್​ಡೌನ್​ನಿಂದ ಅರ್ಧದಲ್ಲೇ ನಿಂತಿತ್ತು. ಈಗ ಲಾಕ್​ಡೌನ್​ ತೆರವಾಗಿ, ಚಿತ್ರೀಕರಣ ಪ್ರಾರಂಭಿಸಬಹುದಾಗಿದೆಯಾದರೂ, ಅಲ್ಲೊಂದು ಸಮಸ್ಯೆ ಎದುರಾಯಿತು.

    ಚಿತ್ರವನ್ನು ಲಡಾಖ್​ನಲ್ಲಿ ಚಿತ್ರೀಕರಿಸಬೇಕು ಎಂಬುದು ಅಮೀರ್​ ಖಾನ್​ ಆಸೆಯಾಗಿತ್ತು. ಲಡಾಖ್​ನಲ್ಲಿ ಒಂದಿಷ್ಟು ಭಾಗದ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಈ ಮುನ್ನ ಸಿದ್ಧತೆ ನಡೆಸಿತ್ತು. ಈ ನಡುವೆ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ಸಂಘರ್ಷ ಉಂಟಾಗಿದ್ದರಿಂದ, ಲಡಾಖ್​ ಬಿಟ್ಟು ಕಾರ್ಗಿಲ್​ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಯೋಚಿಸಿತ್ತು.

    ಇದನ್ನೂ ಓದಿ: ಹಿನ್ನೆಲೆ ಡಾನ್ಸರ್​ಗಳ ಖಾತೆಗೆ ಹಣ ವರ್ಗಾವಣೆ ಮಾಡಿದ ಕತ್ರಿನಾ ಕೈಫ್

    ಇನ್ನೇನು ಚಿತ್ರದ ಇನ್ನೊಂದು ಹಂತದ ಚಿತ್ರೀಕರಣ ಕಾರ್ಗಿಲ್​ನಲ್ಲಿ ನಡೆಯಲಿದೆ ಅಂತ ಎಲ್ಲರೂ ಅಂದುಕೊಂಡರೆ, ಚಿತ್ರತಂಡ ಟರ್ಕಿಗೆ ಚಿತ್ರೀಕರಣವನ್ನು ಶಿಫ್ಟ್​ ಮಾಡಿತು. ಅದರಂತೆ, ಅಮೀರ್​ ಖಾನ್​ ಸೇರಿದಂತೆ ಚಿತ್ರತಂಡದವರು ಇಂದು ಟರ್ಕಿಗೆ ಪ್ರಯಾಣ ಬೆಳೆಸಿದ್ದೂ ಆಗಿದೆ. ಆದಷ್ಟು ಬೇಗ ಚಿತ್ರತಂಡದವರು, ಚಿತ್ರೀಕರಣ ಮುಗಿಸಿ, ಈ ವರ್ಷದ ಕೊನೆಗೆ ಚಿತ್ರ ಬಿಡುಗಡೆ ಮಾಡಲಿದ್ದಾರೆ ಎಂದು ಜನ ಅಂದುಕೊಂಡಿದ್ದಷ್ಟೇ ಬಂತು. ಈಗ ಚಿತ್ರದ ಬಿಡುಗಡೆ ಒಂದು ವರ್ಷ ಮುಂದಕ್ಕೆ ಹೋಗಿದೆ.

    ‘ಲಾಲ್​ ಸಿಂಗ್​ ಛಡ್ಡಾ’ ಚಿತ್ರದಲ್ಲಿ ಅಮೀರ್​ ಖಾನ್ ಜತೆಗೆ ಕರೀನಾ ಕಪೂರ್​, ವಿಜಯ್​ ಸೇತುಪತಿ ಮುಂತಾದವರು ನಟಿಸಿದ್ದು, ಅದ್ವೈತ್​ ಚಂದನ್​ ನಿರ್ದೇಶನ ಮಾಡುತ್ತಿದ್ದಾರೆ.

    ಹೇಳಿದಂತೆ ಮಾಡಿ ತೋರಿಸಿದ ಸಂಜಯ್​ ದತ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts