ಅವಳನ್ನು ಕಡೆಯದಾಗಿ ನೋಡಿದ್ದೇ ಅಲ್ಲಿ...! ಮೊದಲ ಪ್ರೇಮಕಥೆ ಬಗ್ಗೆ ಮೌನ ಮುರಿದ ನಟ ಶಿವಕಾರ್ತಿಕೇಯನ್​ | Love Story

ವಿಜಯವಾಣಿ - 2025-02-13T153238.495
Published on

Love Story: ಪ್ರತಿಯೊಬ್ಬರ ಜೀವನದಲ್ಲಿಯೂ ಒಂದೊಂದು ರೀತಿಯ ಪ್ರೇಮಕಥೆ ಇರುತ್ತದೆ. ಕೆಲವರು ತಮ್ಮ ಪ್ರೀತಿ ಮತ್ತು ಪ್ರೀತಿಸಿದ ವ್ಯಕ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ, ಇನ್ನೂ ಕೆಲವರು ವಿಫಲರಾಗುತ್ತಾರೆ. ಆದರೆ, ಅದು ಯಶಸ್ವಿಯಾಗಲಿ ಅಥವಾ ಆಗದಿರಲಿ ಮೊದಲ ಪ್ರೇಮ, ಪ್ರೇಮಕಥನಾ ಎಂದೆಂದಿಗೂ ಸಿಹಿ ಎಂಬ ಭಾವ ಅನೇಕರದ್ದು. ನಾವು ಪ್ರೀತಿಸಿದ ಮೊದಲ ಹುಡುಗಿ ಅಥವಾ ಹುಡುಗನನ್ನು ಮರೆಯಲು ಸಾಧ್ಯವಿಲ್ಲ. ಇದು ಎಲ್ಲರಿಗೂ ಅಲ್ಲ ಕೆಲವರ ವಿಷಯದಲ್ಲಿ ಮಾತ್ರ ಎಂಬುದು ಗಮನಾರ್ಹ. ಎಲ್ಲರಂತೆ ತನಗೂ ಪ್ರೀತಿಯಾಗಿತ್ತು. ಆ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ತಮಿಳು ನಟ ಶಿವ ಕಾರ್ತಿಕೇಯನ್​ ಹೇಳಿದ್ದಾರೆ.

ಯಾವುದೇ ಹಿನ್ನೆಲೆ ಮತ್ತು ಗಾಡ್​ಫಾಧರ್​ ಇಲ್ಲದೆಯೇ ಚಿತ್ರೋದ್ಯಮಕ್ಕೆ ಎಂಟ್ರಿಕೊಟ್ಟ ಶಿವಕಾರ್ತಿಕೇಯನ್, ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇತ್ತೀಚೆಗೆ 'ಅಮರನ್' ಚಿತ್ರದ ಮೂಲಕ ಬ್ಲಾಕ್​ಬಸ್ಟರ್ ಹಿಟ್ ನೋಡಿದ ಶಿವಕಾರ್ತಿಕೇಯನ್​, .ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಶಿವಕಾರ್ತಿಕೇಯನ್, ಎಲ್ಲರಂತೆ, ನನಗೂ ಮೊದಲ ಪ್ರೀತಿ ಆಗಿತ್ತು. ಆ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ನನ್ನ ಕಾಲೇಜು ದಿನಗಳಲ್ಲಿ ನಾನು ಒಬ್ಬಳು ಹುಡುಗಿಯನ್ನು ಪ್ರೀತಿಸುತ್ತಿದ್ದೆ. ಅದೊಂದು ರೀತಿ ಒನ್​ ವೇ ಲವ್​ ಆಗಿತ್ತು. ನಾನು ಆಕೆಯನ್ನು ಭೇಟಿಯಾದಾಗ ಅವಳ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಆಗಲೇ ಇಲ್ಲ. ಆದ್ರೆ, ನನ್ನಲ್ಲಿದ್ದ ಪ್ರೀತಿಯನ್ನು ಅರ್ಥಮಾಡಿಕೊಂಡಿದ್ದ ಆಕೆ, ದೂರದಿಂದಲೇ ನನ್ನ ನೋಡುತ್ತಾ ಪ್ರೀತಿಸಿದಳು ಎಂದರು.

ಅದಾದ ತುಂಬ ದಿನಗಳ ಬಳಿಕ ನಾನು ಆಕೆಯನ್ನು ಅವಳ ಬಾಯ್​ಫ್ರೆಂಡ್​ ಜತೆಗೆ ಹೋಗುವುದನ್ನು ನೋಡಿದೆ. ಅಂದಿನಿಂದ ನಾನು ಅವಳನ್ನು ಎಲ್ಲಿಯೂ ನೋಡಲೇ ಇಲ್ಲ. ಅವಳಿಗೆ ಹೇಳದೆ ನನ್ನ ಪ್ರೀತಿ ಸೋತಿತು. ಹಲವು ದಿನಗಳ ಬಳಿಕ ಅವಳನ್ನು ಮತ್ತೆ ನೋಡಿದ್ದು, ಅದು ಒಂದು ಶಾಪಿಂಗ್ ಮಾಲ್‌ನಲ್ಲಿ. ಆಗ ಅವಳಿಗೆ ಮದುವೆಯಾಗಿತ್ತು. ಆದರೆ, ಮದುವೆಯಾದ ವ್ಯಕ್ತಿ ಅವಳು ಪ್ರೀತಿಸಿದ ವ್ಯಕ್ತಿಯಾಗಿರಲಿಲ್ಲ. ಅದನ್ನು ನೋಡಿ ನನಗೆ ನಗು ಬಂದಿತು. ನನಗೆ ಸಿಗದ ಹುಡುಗಿ ಅವನಿಗೂ ಸಿಗಲಿಲ್ಲ ಎಂಬುದನ್ನು ನೆನೆದು ನನ್ನಲ್ಲಿ ನಗು ತರಿಸಿತು ಎಂದು ಮನಬಿಚ್ಚಿ ತಮ್ಮ ಮೊದಲ ಪ್ರೀತಿ ಬಗ್ಗೆ ಹಂಚಿಕೊಂಡರು.

ಇನ್ನೂ ಸಿನಿಮಾ ವಿಷಯಕ್ಕೆ ಬಂದರೆ, ಶಿವಕಾರ್ತಿಕೇಯನ್ ಅವರ ಕೈಯಲ್ಲಿ ಪ್ರಸ್ತುತ ಎರಡು ಬಿಗ್ ಪ್ರಾಜೆಕ್ಟ್​ಗಳಿವೆ. ಇವುಗಳ ಪೈಕಿ ಒಂದನ್ನು ಆರ್. ಮುರುಗದಾಸ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಟೈಟಲ್​ ಇದೇ ಫೆಬ್ರವರಿ 17ರಂದು ನಟನ ಜನ್ಮದಿನದಂದು ಅನಾವರಣಗೊಳ್ಳಲಿದೆ. ಈ ಚಿತ್ರದಲ್ಲಿ ಶಿವಕಾರ್ತಿಕೇಯನ್​ಗೆ ನಾಯಕಿಯಾಗಿ ಕನ್ನಡ ನಟಿ ರುಕ್ಮಿಣಿ ವಸಂತ್​ ಅಭಿನಯಿಸಲಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ಸಂಯೋಜಿಸಲಿದ್ದಾರೆ. ಈ ಚಿತ್ರದ ಜತೆಗೆ ಸುಧಾ ಕೊಂಗರ ನಿರ್ದೇಶನದಲ್ಲಿ ಮೂಡಿಬರಲಿರುವ 'ಪರಾಶಕ್ತಿ' ಎಂಬ ಚಿತ್ರದಲ್ಲಿ ಶಿವಕಾರ್ತಿಕೇಯನ್​ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಜತೆಗೆ ಶ್ರೀಲೀಲಾ, ಅಥರ್ವ, ರವಿ ಮೋಹನ್ ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net