blank

ರಜತ್​ ಪಾಟೀದಾರ್​ ನೂತನ ಕ್ಯಾಪ್ಟನ್​! ಕಡೆಗೂ ಮಿ.360 ಮಾತಿಗೆ ಕಿಮ್ಮತ್ತು ಕೊಡದ RCB ಮ್ಯಾನೇಜ್​ಮೆಂಟ್​

blank

RCB: ಈ ವರ್ಷ ನಡೆಯಲಿರುವ ಐಪಿಎಲ್ 18ನೇ ಆವೃತ್ತಿಗೆ ಈಗಾಗಲೇ ದಿನಗಣನೆ ಆರಂಭಗೊಂಡಿದೆ. ಇದೇ ಮಾರ್ಚ್​ 21ರಿಂದ ಪ್ರಾರಂಭವಾಗಲಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ತಮ್ಮ ತಂಡ ಹೇಗೆ ಪ್ರದರ್ಶನ ನೀಡಲಿದೆ? ಈ ಸಲವಾದ್ರೂ ಕಪ್ ನಮ್ಮದಾಗಲಿದೆಯಾ? ಎಂಬ ಕುತೂಹಲ ಆರ್​ಸಿಬಿ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದಕ್ಕಿಂತ ಅತೀ ಹೆಚ್ಚಾಗಿ ಈ ಬಾರಿ ಯಾರು ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆ ಫ್ಯಾನ್ಸ್​ಗಳನ್ನು ಬೆಂಬಿಡದೆ ಕಾಡುತ್ತಲೇ ಇತ್ತು. ಆದರೆ, ಉತ್ತರ ಮಾತ್ರ ಸ್ಪಷ್ಟವಾಗಿರಲಿಲ್ಲ. ಆರ್​ಸಿಬಿ ಮುಂದೆ ಇದ್ದದ್ದು ಕೇವಲ ಒಂದೇ ಒಂದು ಹೆಸರು. ಅದು ವಿರಾಟ್ ಕೊಹ್ಲಿ. ಆದ್ರೆ, ಈಗ ಅದೂ ಬದಲಾಗಿರುವುದು ಬಹುತೇಕರಿಗೆ ಆಶ್ಚರ್ಯ ತಂದಿದೆ.

ಇದನ್ನೂ ಓದಿ: ಅಪಘಾತದಲ್ಲಿ ಪಂತ್​ ಜೀವ ಉಳಿಸಿದ ಯುವಕನಿಂದ ಆತ್ಮಹತ್ಯೆ ಯತ್ನ! ಜೀವನ್ಮರಣ ಹೋರಾಟ, ಪ್ರೇಯಸಿ ಸಾವು | Rishabh Pant

ಕಳೆದ ವರ್ಷ ನವೆಂಬರ್​ನಲ್ಲಿ ಎರಡು ದಿನಗಳ ಕಾಲ ನಡೆದ ಹರಾಜು ಪ್ರಕ್ರಿಯೆ ಬಳಿಕ ಅಭಿಮಾನಿಗಳಲ್ಲಿ ಕಾಡಿದ ಒಂದೇ ಒಂದು ಪ್ರಶ್ನೆ ಯಾರು ಈ ಬಾರಿಯ ಕ್ಯಾಪ್ಟನ್ ಎಂದು. ಇದಕ್ಕೆ ಹಲವಾರು ರೀತಿಯ ವದಂತಿಗಳು ಜಾಲತಾಣಗಳಲ್ಲಿ ಹರಿದಾಡಿದವು. ಒಂದೆಡೆ, ಮಾಜಿ ಕ್ಯಾಪ್ಟನ್, ‘ರನ್​ ಮಷಿನ್’​ ವಿರಾಟ್​ ಕೊಹ್ಲಿ ಅವರೇ 2025ರ ಐಪಿಎಲ್​ ಲೀಗ್​ನಲ್ಲಿ ಆರ್​ಸಿಬಿ ನೂತನ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹಲವು ವರದಿಗಳು ಹೇಳಿತು. ಆದ್ರೆ, ಇದ್ಯಾವುದಕ್ಕೂ ಗಮನ ಕೊಡದ ಫ್ಯಾನ್ಸ್​, ಆರ್​ಸಿಬಿ ತಂಡದ ಮಾಜಿ ಆಟಗಾರ, ಮಿ.360 ಎಬಿ ಡಿವಿಲೀಯರ್ಸ್​ ಮಾತನ್ನು ಬಹಳ ಬಲವಾಗಿ ನಂಬಿದ್ದರು. ಆದ್ರೆ. ಈಗ ಅದು ಬದಲಾಗಿದೆ.

ಎಬಿಡಿ ಹೇಳಿದ್ದೇನು?

“ಕಳೆದ ವರ್ಷಗಳಲ್ಲಿ ವಿರಾಟ್​ ಅದ್ಭುತ ಇನ್ನಿಂಗ್ಸ್​ಗಳನ್ನು ನಾವೆಲ್ಲಾ ನೋಡಿದ್ದೇವೆ. ಅವರ ಆಟ ನಿಜಕ್ಕೂ ಸ್ಪೂರ್ತಿದಾಯಕ. ತಮ್ಮ ವೃತ್ತಿಯ ಕೊನೆಗೆ ಸನ್ನಿಹಿತದಲ್ಲಿದ್ದಾರೆ. ಆದರೂ ಸಹ ಅವರ ಆಟದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ನಾಯಕನ ಜವಾಬ್ದಾರಿ ಯಾರಿಗೆ ಕೊಡಬೇಕು ಎಂಬ ವಿಷಯದಲ್ಲಿ ಫ್ರಾಂಚೈಸಿಗೆ ಬೇರೆ ಯಾವುದೇ ಆಯ್ಕೆಗಳಿಲ್ಲ. ಅವರ ಮುಂದಿರುವುದು ವಿರಾಟ್​ ಕೊಹ್ಲಿ ಮಾತ್ರ” ಎಂದು ಹೇಳಿದ್ದರು. ಆದ್ರೆ, ಫ್ರಾಂಚೈಸಿ ಈಗ ತಮ್ಮ ತಂಡದ ಯುವ ಬ್ಯಾಟರ್​, ಸರಳ ವ್ಯಕ್ತಿತ್ವ ಹೊಂದಿರುವ ರಜತ್ ಪಾಟೀದಾರ್​ಗೆ ನಾಯಕನ ಜವಾಬ್ದಾರಿ ಹಸ್ತಾಂತರಿಸಿದೆ.

ಕಳೆದ ವರ್ಷಗಳಲ್ಲಿ ಆರ್​ಸಿಬಿ ಪರ ಅದ್ಭುತ ಇನ್ನಿಂಗ್ಸ್​ ಆಡಿರುವ ರಜತ್, ಫ್ರಾಂಚೈಸಿಯೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಂಡಿದ್ದಾರೆ. ಇದರ ಜತೆಗೆ ತಂಡದ ಎಲ್ಲಾ ಸದಸ್ಯರೊಡನೆ ಒಳ್ಳೆಯ ಬಾಂಧವ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದೆಲ್ಲವನ್ನು ಗಣನೆಗೆ ತೆಗೆದುಕೊಂಡ ಆರ್​ಸಿಬಿ ಮ್ಯಾನೇಜ್​ಮೆಂಟ್​, ಇದೀಗ ವಿರಾಟ್​ ಕೊಹ್ಲಿ ಹೆಸರನ್ನು ಬದಿಗಿಟ್ಟು ರಜತ್ ಪಾಟೀದಾರ್​ರನ್ನು ತಂಡದ ನೂತನ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದೆ,(ಏಜೆನ್ಸೀಸ್). ​

ಎಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿದ್ರೆ ಲಿವರ್​ ಡ್ಯಾಮೇಜ್​ ಆಗುತ್ತದೆ! ಇಲ್ಲಿದೆ ನೋಡಿ ಅಚ್ಚರಿ ವರದಿ | Liver Health

Share This Article

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…