ಅತ್ತಿಗೆ-ಮೈದುನ ಅಕ್ರಮ ಸಂಬಂಧ: ಸ್ವಂತ ಅಣ್ಣನನ್ನೇ ಕೊಂದನಾ ತಮ್ಮ?

murder
Published on

ಬೆಂಗಳೂರು: ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿ ಒಡಹುಟ್ಟಿದ ಅಣ್ಣನನ್ನೇ ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕು ದೊಡ್ಡಮಂಕಲಾಳದಲ್ಲಿ ನಡೆದಿದೆ.

ಗಂಗರಾಜು (35) ಕೊಲೆಯಾದ ದುರ್ದೈವಿ. ಗಂಗರಾಜು ಪತ್ನಿ ಭಾಗ್ಯಮ್ಮ ಜೊತೆ ಆತನ ತಮ್ಮ ರವಿ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. 5 ವರ್ಷಗಳ ಹಿಂದೆ ರವಿ ತನ್ನ ಅತ್ತಿಗೆಯನ್ನು ಕರೆದುಕೊಂಡು ಓಡಿ ಹೋಗಿದ್ದ. ಹೀಗಾಗಿ ಗಂಗರಾಜು ತನ್ನ ಮೂವರು ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದ್ದ. 15 ದಿನದ ಹಿಂದೆ ಪತ್ನಿ ಮತ್ತು ತನ್ನ ತಮ್ಮ ಊರಿಗೆ ವಾಪಸ್​ ಬಂದಾಗ ಗಂಗರಾಜು ಪ್ರಶ್ನಿಸಿದ್ದಾನೆ. ಆಗ ಅಣ್ಣ ತಮ್ಮನ ನಡುವೆ ಮಾತಿನ ಚಕಮಕಿಯಾಗಿತ್ತು ಎನ್ನಲಾಗಿದೆ.

ಅಣ್ಣ -ತಮ್ಮನ ನಡುವೆ ನಡೆದ ಗಲಾಟೆಯಲ್ಲಿ ರವಿ ಮತ್ತು ಭಾಗ್ಯಮ್ಮ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗಂಗರಾಜು ತಲೆ ಮೇಲೆ‌ ಕಲ್ಲು ಎತ್ತಿ ಹಾಕಲಾಗಿದ್ದು, ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದಾರೆ. ದೊಡ್ಡಮಂಕಲಾಳ ಪೋಲೀಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net