

NitaAmbani: ಈ ವರ್ಷದ ಸೆಪ್ಟೆಂಬರ್ 12ರಿಂದ 14 ರವರೆಗೆ, ನ್ಯೂಯಾರ್ಕ್ ನಗರದಲ್ಲಿ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ವಾರಾಂತ್ಯದ ಮೂರು ದಿನಗಳ ಕಾಲ ನೃತ್ಯ, ಸಂಗೀತ, ಫ್ಯಾಷನ್ ಜೊತೆಗೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
2019ರಲ್ಲಿ ದಿ ಮೆಟ್ ಸೇರಿದಂತೆ ವಿಶ್ವದಾದ್ಯಂತದ ಸಾಂಸ್ಕೃತಿಕ ಸ್ಥಳಗಳಿಗೆ ಭೇಟಿ ನೀಡಿ, NMACC ಅನ್ನು ಸ್ಥಾಪಿಸಲು ಸ್ಫೂರ್ತಿ ಪಡೆದ ನೀತಾ ಅಂಬಾನಿ, 2019ರಲ್ಲಿ ಅದರ ಗೌರವ ಟ್ರಸ್ಟಿ ಆದರು. "ನನ್ನ ಮಕ್ಕಳೊಂದಿಗೆ ಲಿಂಕನ್ ಸೆಂಟರ್ ಮತ್ತು ಸಿಡ್ನಿ ಒಪೇರಾ ಹೌಸ್ ಅನ್ನು ನೋಡಿದ ನಂತರ, ಭಾರತಕ್ಕೆ ಅಂತಹ ಸ್ಥಳ ಏಕೆ ಇರಬಾರದು ಎಂದು ನಾನು ಆಶ್ಚರ್ಯ ಪಡುತ್ತಿದ್ದೆ" ಎಂದು ಹೇಳಿದ್ದಾರೆ. "ನೃತ್ಯ, ನಾಟಕ ಅಥವಾ ಸಂಗೀತದ ಮೂಲಕವೂ ಜಾನಪದ, ಕಲೆ ಮತ್ತು ಕರಕುಶಲ ವಸ್ತುಗಳ ಮುಖೇನ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಬಹುದಾದ ಸ್ಥಳವನ್ನು ರಚಿಸಲು ನಾನು ಉತ್ಸುಕಳಾಗಿದ್ದೇನೆ" ಎಂದಿದ್ದರು.
ಅಂದಿನಿಂದ 'ಬ್ರಾಡ್‌ವೇ ಸಂಗೀತ'ಮಯ 'ಮಮ್ಮಾ ಮಿಯಾ'! ಮತ್ತು 'ದಿ ಫ್ಯಾಂಟಮ್ ಆಫ್ ದಿ ಒಪೇರಾ'ದಿಂದ ಕಥಕ್ ಪ್ರದರ್ಶನಗಳು ಮತ್ತು ಬಂಗಾಳಿ ಸಂಗೀತ ಕಚೇರಿ ಮತ್ತು ಯಾಯೋಯ್ ಕುಸಾಮಾ , ಆಂಡಿ ವಾರ್ಹೋಲ್ ಮತ್ತು ಡಾನ್ ಫ್ಲೇವಿನ್‌ರಂತಹವರ ದೃಶ್ಯ ಕಲಾ ಸ್ಥಳಗಳನ್ನು ಸ್ಥಾಪಿಸಿದ್ದಾರೆ ನೀತಾ ಅಂಬಾನಿ. ಇದೀಗ ಅಮೆರಿಕಾದ ನ್ಯೂಯಾರ್ಕ್ನ ಲಿಂಕನ್ ಸೆಂಟರ್ನಲ್ಲಿರುವ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ 12ರಿಂದ 14 ರವರೆಗೆ ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಹಬ್ಬ ನಡೆಯಲಿದೆ, (ಏಜೆನ್ಸೀಸ್).