ನಾನು ಯಾವುದನ್ನೂ ಮರೆತಿಲ್ಲ; ಚಿತ್ರರಂಗದ ಇತಿಹಾಸ ನನ್ನೊಬ್ಬಳಿಗೆ ಮಾತ್ರ ತಿಳಿದಿರೋದು: ಆಶಾ ಭೋಂಸ್ಲೆ

Untitled design - 2023-08-08T204429.006
Published on

ಮುಂಬೈ: ಮಂಗಳವಾರ (ಆಗಸ್ಟ್​ 06) ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿ, ಮಾತನಾಡಿದ ದಿವಂಗತ ಗಾಯಕಿ ಲತಾ ಮಂಗೇಶ್ಕರ್​ ಅವರ ಸಹೋದರಿ, ಪ್ರಸಿದ್ಧ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ, "ಚಿತ್ರರಂಗದ ಇತಿಹಾಸ ನನ್ನೊಬ್ಬಳಿಗೆ ಮಾತ್ರ ತಿಳಿದಿರೋದು. ನಾನು ಏನ್ನನ್ನೂ ಮರೆತಿಲ್ಲ. ಈ ಸಿನಿಮಾ ರಂಗದ ಕೊನೆಯ ಮೊಘಲ್​ ನಾನು" ಎಂದು ನೀಡಿದ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

"ನನಗೆ ಮಾತ್ರ ಇಡೀ ಚಿತ್ರರಂಗದ ಇತಿಹಾಸ ತಿಳಿದಿರುವುದು. ಹಲವಾರು ಕಥೆಗಳಿವೆ, ಇದರ ಬಗ್ಗೆ ನಾನು ಮಾತನಾಡಲು ಪ್ರಾರಂಭಿಸಿದರೆ 3-4 ದಿನಗಳೇ ಬೇಕಾಗುತ್ತದೆ. ನಾನು ಯಾವುದನ್ನೂ ಕೂಡ ಮರೆತಿಲ್ಲ. ಈ ಸಿನಿಮಾ ರಂಗದ ಕೊನೆಯ ಮೊಘಲ್ ನಾನು" ಎಂದು ಗಾಯಕಿ ಆಶಾ ಭೋಸ್ಲೆ ಅವರು ಒತ್ತಿ ಹೇಳಿದ್ದಾರೆ.

ಈ ದೃಶ್ಯವು ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ, ವಿಡಿಯೋ ನೋಡಿದ ನೆಟ್ಟಿಗರೊಬ್ಬರು, “ಮೊಘಲ್ ಸಾಮ್ರಾಜ್ಯದ ಕೊನೆಯ ಮೊಘಲ್ ಈಗ ಹೌರಾದ ಸ್ಲಮ್‌ನಲ್ಲಿ ವಾಸಿಸುತ್ತಿದ್ದಾರೆ. ಆಕೆಯ ಹೆಸರು ಸುಲ್ತಾನಾ ಬೇಗಂ. ಮತ್ತೊಬ್ಬ ಮೊಘಲ್ ವಂಶಸ್ಥರು ಜಹಾನಾಬಾದ್‌ನಲ್ಲಿ ಭಿಕ್ಷೆ ಬೇಡುತ್ತಾರೆ. ನಿಮ್ಮನ್ನು ನೀವು ಏಕೆ ಮೊಘಲರಿಗೆ ಹೋಲಿಸಿಕೊಳ್ಳುತ್ತೀರಾ?" ಎಂದು ಕಮೆಂಟ್​ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net