

ಮುಂಬೈ: ಈ ವಾರ ಸಿನಿಪ್ರಿಯರಿಗೆ ಭರಪೂರ ಮನರಂಜನೆಗೆ ಯಾವುದೇ ಕೊರತೆ ಇಲ್ಲ ಎಂಬುದನ್ನು ಈಗಾಗಲೇ ಸ್ಟಾರ್ ನಟರ ಸಿನಿಮಾಗಳ ಟ್ರೇಲರ್, ಟೀಸರ್, ಬಿಡುಗಡೆಯ ದಿನಾಂಕ ಖಚಿತಪಡಿಸಿದೆ. ಮೆಗಾಸ್ಟಾರ್, ಸೂಪರ್ಸ್ಟಾರ್ನ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಈ ಪೈಕಿ ಯಾವ ಭಾಷೆಯ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಮತ್ತು ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ.
ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿರುವ ಸಿನಿಮಾಗಳಿವು:
ಆಗಸ್ಟ್ 10: ಜೈಲರ್ (ಮೂಲ ತಮಿಳು ಭಾಷೆ, ತೆಲುಗು ಡಬ್)
ಆಗಸ್ಟ್ 11: ಭೋಲಾ ಶಂಕರ್ (ತೆಲುಗು )
ಆಗಸ್ಟ್ 11: ಗದರ್ 2 (ಹಿಂದಿ)
ಆಗಸ್ಟ್ 11: ಓ ಮೈ ಗಾಡ್ 2 (ಹಿಂದಿ)
ಆಗಸ್ಟ್ 12: ಉಸ್ತಾದ್ (ತೆಲುಗು)
ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳಿವು:
ನೆಟ್‌ಫ್ಲಿಕ್ಸ್:
ಆಗಸ್ಟ್ 11- ಹಾರ್ಟ್ ಆಫ್ ಸ್ಟೋನ್ (ಇಂಗ್ಲಿಷ್ )
ಸೋನಿ ಲೈವ್:
ಆಗಸ್ಟ್ 11- ಪೋರ್ ಥೋಜಿಲ್ (ತಮಿಳು )
ಅಮೆಜಾನ್ ಪ್ರೈಮ್ ವಿಡಿಯೋ:
ಆಗಸ್ಟ್ 10- ಮೇಡ್ ಇನ್ ಹೆವೆನ್ S2 (ಹಿಂದಿ ವೆಬ್ ಸಿರೀಸ್)
ಆಗಸ್ಟ್ 11- ಮಾವೀರನ್ (ಮೂಲ ತಮಿಳು, ತೆಲುಗು ಡಬ್),(ಏಜೆನ್ಸೀಸ್).