ನೆರೆಹೊರೆಯವರ ಮೇಲೆ ಕೇಸ್​ ಹಾಕಲು ಮಗಳನ್ನು ಕೊಂದ ಪಾಪಿ ತಂದೆ | Murder

crime
Published on

ಉತ್ತರ ಪ್ರದೇಶ: ಜಮೀನು ವಿವಾದದಿಂದ ಮನನೊಂದಿದ್ದ ವ್ಯಕ್ತಿಯೊಬ್ಬ ತಮ್ಮ ನೆರೆಹೊರೆ ಅವರ ಮೇಲೆ ಕೊಲೆ ಕೇಸ್​ ಹಾಕಲು ತನ್ನ ಮಗಳನ್ನು(Murder) ಕೊಂದಿದ್ದಾನೆ. ಈ ಘಟನೆ ಯುಪಿಯ ಕುಶಿನಗರ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದಿದೆ.

16 ವರ್ಷದ ಮಗಳನ್ನು ಕೊಂದ ಬಳಿಕ ಪರಾರಿಯಾಗಿದ್ದ ತಂದೆ ಜಯನಾರಾಯಣ್ ಸಿಂಗ್ ಅನ್ನು ಸುಮಾರು ಎರಡು ವಾರಗಳ ನಂತರ ಮಂಗಳವಾರ(ನ.12) ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ

ಜಯನಾರಾಯಣ್ ಸಿಂಗ್ ತಮ್ಮ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಕದ ಜಮೀನ ಮಾಲೀಕರು ಜತೆ ವಿವಾದ ನಡೆಯುತ್ತಲೆ ಇತ್ತು. ಇದೇ ವಿಚಾರ ಇಟ್ಟುಕೊಂಡು ಮಗಳನ್ನು ಕೊಂದು ಈ ಕೇಸ್​ ಅನ್ನು ಅವರ ಮೇಲೆ ಹಾಕಿದರೆ ಮತ್ತೆ ನನ್ನ ಜಮೀನಿ ವಿಚಾರಕ್ಕೆ ಬರುವುದಿಲ್ಲ ಎಂದು ಯೋಜನೆ ಹಾಕಿಕೊಂಡಿದ್ದಾನೆ. ಮನೆಯಲ್ಲಿ ನಾಲ್ಕು ಸಹೋದರಿಯರ ಪೈಕಿ ಕೊನೆಯವಳು ಮನೆಯಲ್ಲಿ ಮಲಗಿದ್ದಾಳೆ. ಯಾರು ಇಲ್ಲದ ವೇಳೆ ಈ ಕೃತ್ಯ ನಡೆಸಿ ಪರಾರಿಯಾಗಿದ್ದಾನೆ. ಕುಶಿನಗರ ಜಿಲ್ಲೆಯ ನೆಬುವಾ ನೌರಂಗಿಯಾ ಗ್ರಾಮದಲ್ಲಿ ನ.1 ರ ತಡರಾತ್ರಿ ಈ ಘಟನೆ ನಡೆದಿದೆ.

ದೀರ್ಘಕಾಲದ ಆಸ್ತಿ ವಿವಾದದ ಹಿನ್ನೆಲೆ ನೆರೆಹೊರೆಯವರ ವಿರುದ್ಧ ಪ್ರಕರಣ ದಾಖಲಿಸಲು ಈ ಕೃತ್ಯ ಮಾಡಿದ್ದೇನೆ ಎಂದು ಜಯನಾರಾಯಣ್ ಕೊಲೆ ಮಾಡಿದ್ದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ತಪ್ಪೊಪ್ಪಿಗೆಯ ನಂತರ ಆತನನ್ನು ಬಂಧಿಸಲಾಗಿದೆ ಎಂದು ಎಎಸ್ಪಿ ರಿತೇಶ್ ಕುಮಾರ್ ಸಿಂಗ್ ಹೇಳಿದ್ದಾರೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net