ಮಹಾರಾಷ್ಟ್ರ: ಇಂದಿರಾಗಾಂಧಿ ಸ್ವರ್ಗದಿಂದ ಮರಳಿ ಬಂದರೂ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಹೇಳಿದರು.
ಮಹಾರಾಷ್ಟ್ರದ ಚುನಾವಣಾ ಪ್ರಚಾರದ ಸಭೆಯಲ್ಲಿ ಬುಧವಾರ(ನ.13) ಮಾತನಾಡಿದ ಶಾ, ”ಸೋನಿಯಾ-ಮನಮೋಹನ್ ಸಿಂಗ್ 10 ವರ್ಷದ ಆಡಳಿತದ ಅವಧಿಯಲ್ಲಿ ಭಯೋತ್ಪಾದಕರು ಪಾಕಿಸ್ತಾನದಿಂದ ಮುಕ್ತವಾಗಿ ಬಂದು ಬಾಂಬ್ಗಳನ್ನು ಸ್ಫೋಟ ಮಾಡುತ್ತಿದ್ದರು” ಎಂದರು.
ಶ್ರೀನಗರದ ಲಾಲ್ಚೌಕ್ಗೆ ಹೋಗಲು ಭಯವಾಗುತ್ತಿದೆ ಎಂಬ ಕೇಂದ್ರ ಮಾಜಿ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾ, ನಿಮ್ಮ ಮೊಮ್ಮಕ್ಕಳೊಂದಿಗೆ ಯಾವುದೇ ಭಯ ಇಲ್ಲದೆ ಈಗ ಕಾಶ್ಮೀರಕ್ಕೆ ತೆರಳಿ, ಯಾವುದೇ ಹಾನಿ ಆಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ ಎಂದರು.
ಇದನ್ನೂ ಓದಿ:ಸುಟ್ಟಿದ್ದು ನಮ್ಮನೆ, ಜೀವ ಹೋಗಿದ್ದು ನಮ್ಮವರದ್ದು; UP CM ಯೋಗಿ ಹೇಳಿಕೆಗೆ ಸಚಿವ Priyank Kharge ತಿರುಗೇಟು
ಈ ಹಿಂದೆ ಮಹಾರಾಷ್ಟ್ರದ ಮತ್ತೊಂದು ಪ್ರಚಾರ ಸಭೆಯಲ್ಲಿ ಶಾ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು. “ರಾಹುಲ್ ಗಾಂಧಿಯವರ ನಾಲ್ಕನೇ ತಲೆಮಾರಿನವರು ಸಹ ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರು ಸ್ಥಾಪಿಸಲು ಸಾಧ್ಯವಾಗಲ್ಲ” ಎಂದು ಹೇಳಿದ್ದರು.
ಕಾಶ್ಮೀರದ ವಿಧಾನಸಭೆಯಲ್ಲಿ 370 ನೇ ವಿಧಿಯನ್ನು ಮರುಸ್ಥಾಪಿಸಲು ಅಂಗೀಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಕಾಶ್ಮೀರದಲ್ಲಿ 370 ಅನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಅವರು ದೇಶದ ಭದ್ರತೆಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಶಾ ಹೇಳಿದರು, (ಏಜೆನ್ಸೀಸ್).
ED, CBI, ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಂಡು ಆಟ ಆಡ್ತೀರಾ: CM Siddaramaiah ಗುಡುಗು