ಬಹುನಿರೀಕ್ಷಿತ 'ಸಲಾರ್' ಸ್ಪೆಷಲ್​ ಸಾಂಗ್​ನಲ್ಲಿ ಪಂಚಾಬಿ ಬೆಡಗಿ ಮಿಂಚು!; ಯಾರು ಈ ನಟಿ?

Untitled design (17)
Published on

ಮುಂಬೈ: ಟಾಲಿವುಡ್​ನ ರೆಬೆಲ್​ ಸ್ಟಾರ್​ ನಟ ಪ್ರಭಾಸ್​ ಅಭಿನಯದ ಬಹುನಿರೀಕ್ಷಿತ 'ಸಲಾರ್'​ ಸಿನಿಮಾ ಇದೀಗ ಡಿಸೆಂಬರ್​ 22 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಈ ಮಧ್ಯೆ ಚಿತ್ರದ ಬಗ್ಗೆ ಹೊಚ್ಚ ಹೊಸ ಮಾಹಿತಿಯೊಂದು ಲಭಿಸಿದ್ದು, 'ಗದರ್​ 2' ಚಿತ್ರದ ಬೆಡಗಿ, ಪಂಜಾಬಿ ನಟಿ ಸಿಮ್ರತ್ ಕೌರ್ ಸಲಾರ್​ನ ವಿಶೇಷ ಹಾಡೊಂದರಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ಡಾರ್ಲಿಂಗ್​ ಪ್ರಭಾಸ್ ಮತ್ತು ​ಪ್ರಶಾಂತ್ ನೀಲ್ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಗ್ಯಾಂಗ್‌ಸ್ಟರ್ ಡ್ರಾಮಾ 'ಸಲಾರ್‌' ಬಿಡುಗಡೆಗಾಗಿ ಸಿನಿಪ್ರೇಕ್ಷಕರು ಮತ್ತು ಅಭಿಮಾನಿಗಳು ಈ ಹಿಂದಿನಿಂದಲೂ ತೀವ್ರ ಕುತೂಹಲ, ಕಾತರ ವ್ಯಕ್ತಪಡಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಸಲಾರ್‌ ಚಿತ್ರದ ವಿಶೇಷ ಹಾಡಿನ ಚಿತ್ರೀಕರಣ ಪ್ರಸ್ತುತ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ.

ಮಾಹಿತಿ ಪ್ರಕಾರ, 'ಬಂಗಾರರಾಜು', 'ಡರ್ಟಿ ಹರಿ' ಮತ್ತು ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್ ಬ್ಲಾಕ್‌ಬಸ್ಟರ್ 'ಗದರ್ 2' ಚಿತ್ರದಲ್ಲಿ ತನ್ನ ವಿಶೇಷ ಅಭಿನಯಕ್ಕಾಗಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಪಂಜಾಬಿ ಬ್ಯೂಟಿ, ನಟಿ ಸಿಮ್ರತ್ ಕೌರ್, ಸಲಾರ್‌ನ ವಿಶೇಷ ಹಾಡಿನಲ್ಲಿ ಮಿಂಚಿದ್ದಾರೆ. ಸದ್ಯ ಈ ಸಂಗತಿ ಸಿನಿಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಬಾಲಿವುಡ್​ನ ಕಿಂಗ್​ ಖಾನ್​ ನಟ ಶಾರುಖ್ ಖಾನ್ ಅಭಿನಯದ 'ಡಂಕಿ' ಕೂಡ 'ಸಲಾರ್' ಬಿಡುಗಡೆ ದಿನವೇ ರಿಲೀಸ್​ ಆಗಲಿದ್ದು, ಇಬ್ಬರು ಸ್ಟಾರ್​ ನಟರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಪೈಪೋಟಿ ಕೊಡುವುದು ಖಚಿತ ಎಂಬ ಲೆಕ್ಕಾಚಾರಗಳು ಸದ್ಯ ಚಿತ್ರರಂಗದಲ್ಲಿ ನಡೆಯುತ್ತಿವೆ.

ಹೊಂಬಾಳೆ ಫಿಲಂಸ್ ನಿರ್ಮಾಣದ 'ಸಲಾರ್​​'ನಲ್ಲಿ ಪ್ರಭಾಸ್​, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಮೀನಾಕ್ಷಿ ಚೌಧರಿ, ಈಶ್ವರಿ ರಾವ್, ಸರಣ್ ಶಕ್ತಿ, ಜಗಪತಿ ಬಾಬು ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net