More

    ಆರ್ಡರ್​ ಮಾಡಿದ್ದು ಮಿಲ್ಕ್​ಶೇಕ್​ ಬಂದಿದ್ದು ಯೂರಿನ್​! ಬಯಲಾಯ್ತು ಡೆಲಿವರಿ ಬಾಯ್​ ಮಹಾ ಎಡವಟ್ಟು

    ವಾಷಿಂಗ್ಟನ್​: ಇಂದು ಎಲ್ಲಿಯೂ ಹೋಗದೇ ಮನೆಯಲ್ಲೇ ಕುಳಿತು ತಮಗೇ ಬೇಕಾದ ವಸ್ತುವನ್ನು ತರಿಸಿಕೊಳ್ಳಬಹುದು. ಇದಕ್ಕೆ ಸ್ಮಾರ್ಟ್​ಫೋನ್​ ಒಂದಿದ್ದರೆ ಸಾಕು. ಮೊದಲೆಲ್ಲ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಆನ್​​ಲೈನ್​​ ವ್ಯವಹಾರ ಇಂದು ಹಳ್ಳಿ ಹಳ್ಳಿಗೂ ವ್ಯಾಪಿಸಿದೆ. ನಿಮ್ಮಿಷ್ಟದ ವಸ್ತುಗಳು, ಊಟ ಸೇರಿದಂತೆ ಎಲ್ಲವು ಆನ್​ಲೈನ್​ನಲ್ಲಿ ಲಭ್ಯವಿದ್ದು, ಆರ್ಡರ್​ ಮಾಡಿದ ಕೆಲವೇ ಕ್ಷಣಗಳಲ್ಲಿ ನಿಮ್ಮ ಬಳಿಗೆ ತಲುಪಿಸುತ್ತಾರೆ. ಆನ್​ಲೈನ್​ ಶಾಪಿಂಗ್​ನಲ್ಲಿ ಕೆಲವೊಮ್ಮೆ ಕಂಪನಿಯವರು ಮಾಡುವ ಎಡವಟ್ಟುಗಳಿಂದ ಗ್ರಾಹಕರು ಆಘಾತಕ್ಕೊಳಗಾಗುವ ಘಟನೆ ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ಅಂಥದ್ದೇ ಮತ್ತೊಂದು ಘಟನೆ ವರದಿಯಾಗಿದೆ.

    ಗ್ರಾಹಕರೊಬ್ಬರು ತಾವು ಆರ್ಡರ್​ ಮಾಡಿದ ಮಿಲ್ಕ್​ಶೇಕ್​ಗೆ ಬದಲಾಗಿ ವಿಚಿತ್ರ ಐಟಂ ಒಂದನ್ನು ಸ್ವೀಕರಿಸಿದ್ದು, ತಮ್ಮ ಜೀವನದಲ್ಲೇ ಅತ್ಯಂತ ಕೆಟ್ಟ ಆನ್​ಲೈನ್​ ಫುಡ್​ ಆರ್ಡರ್​ ಅನುಭವ ಹೊಂದಿದ್ದಾರೆ.

    ಅಂದಹಾಗೆ ಗ್ರಾಹಕನ ಹೆಸರು ಕ್ಯಾಲೆಬ್​ ವುಡ್ಸ್. ಇವರು ಅಮೆರಿಕದ ಉತಾಹ್​ ಮೂಲದ ನಿವಾಸಿ. ಗ್ರಬ್​ಹಬ್​ ಫುಡ್​ ಡೆಲಿವರಿ ಆ್ಯಪ್​ ಮುಖಾಂತರ ಚಿಕ್​ಫಿಲ್​ನಿಂದ ಮಿಲ್ಕ್​ಶೇಕ್​ ಮತ್ತು ಫ್ರೆಂಚ್​ ಫ್ರೈ ಅನ್ನು ಆರ್ಡರ್​ ಮಾಡಿದ್ದರು. ಆದರೆ, ಯಾವಾಗ ತಾನು ಆರ್ಡರ್​ ಮಾಡಿದ್ದ ಐಟಂ ಮನೆಗೆ ತಲುಪಿತೋ ಅದನ್ನು ನೋಡಿದ ಕ್ಯಾಲೆಬ್​ ವುಡ್ಸ್​ ಒಂದು ಕ್ಷಣ ದಂಗಾಗಿದ್ದಾರೆ.

    ಪ್ಯಾಕಿಂಗ್​ ಓಪನ್​ ಮಾಡಿದ ಬಳಿಕ ಮಿಲ್ಕ್​ಶೇಕ್​ ಅಂತ ಸ್ಟ್ರಾ ಹಾಕಿ ಒಂದು ಸಿಪ್​ ಕುಡಿದಿದ್ದು, ವಿಚಿತ್ರ ಅನುಭವ ಹೊಂದಿದಾಗ ಒಂದು ಕ್ಷಣ ಕಪ್​ ನೋಡಿದ ಕ್ಯಾಲೆಬ್​ ವುಡ್ಸ್​ ಅಸಹ್ಯ ಪಟ್ಟುಕೊಂಡರು. ಏಕೆಂದರೆ, ಆ ಕಪ್​ನಲ್ಲಿ ಇದ್ದಿದ್ದು ಮಿಲ್ಕ್​ಶೇಕ್​ ಅಲ್ಲ ಬದಲಾಗಿ ಬೆಚ್ಚಗಿನ ಮೂತ್ರ. ನಿಜಕ್ಕೂ ಇದು ಅಸಹ್ಯ ಎನಿಸದೇ ಇರದರು.

    ಇದರಿಂದ ಆಕ್ರೋಶಗೊಂಡ ಕ್ಯಾಲೆಬ್​ ವುಡ್ಸ್​, ತಕ್ಷಣ ಡೆಲಿವರಿ ಏಜೆಂಟ್​ಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ಇದೇ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ಸಹ ನಡೆಯಿತು. ಈ ವೇಳೆ ಡೆಲಿವರಿ ಏಜೆಂಟ್​ ತಪ್ಪೊಪ್ಪಿಕೊಂಡಿದ್ದು, ನಿರಂತರ ಕೆಲಸದಿಂದಾಗಿ ಮೂರ್ತ ವಿಸರ್ಜನೆಗೂ ಸಮಯ ಸಿಗದಿದ್ದಾಗ ಕಾರಿನಲ್ಲೇ ಮೂತ್ರ ವಿಸರ್ಜನೆ ಮಾಡಲು ಬೀಸಾಡಬಹುದಾದ ಕಪ್​ಗಳನ್ನು ಬಳಸುತ್ತೇನೆ. ಇಂದಿನ ಯಡವಟ್ಟಿಗೂ ಇದೇ ಕಾರಣವಾಗಿದೆ ಎಂದು ಡೆಲಿವರಿ ಏಜೆಂಟ್​ ಸ್ಪಷ್ಟನೆ ನೀಡಿದ್ದಾರೆ.

    ಆದರೆ, ಕ್ಯಾಲೆಬ್​ ವುಡ್ಸ್​ ತೀವ್ರ ಅಸಮಾಧಾನಗೊಂಡಿದ್ದು, ಹಣ ರಿಫಂಡ್​ ಮಾಡುವಂತೆ ಗ್ರಬ್​ಹಬ್​ ಸಂಪರ್ಕಿಸಿದ್ದಾರೆ. ಆದರೆ, ಈವರೆಗೂ ರೀಫಂಡ್​ ಸ್ವೀಕರಿಸಿಲ್ಲ. ಇನ್ನೊಂದೆಡೆ ಗ್ರಬ್​ಹಬ್​ ಪತ್ರಿಕಾ ಹೇಳಿಕೆಯನ್ನು ನೀಡಿದ್ದು, ಡೆಲಿವರಿ ಏಜೆಂಟ್​ ಅನ್ನು ಕೆಲಸದಿಂದ ತೆಗೆದು ಹಾಕಿರುವುದಾಗಿ ತಿಳಿಸಿದೆ. (ಏಜೆನ್ಸೀಸ್​)

    ಪುಣೆ-ಐಸಿಸ್ ಮಾಡ್ಯೂಲ್ ಪ್ರಕರಣ: ಆರೋಪಿಗಳೆಲ್ಲರೂ ಅತಿ ಬುದ್ಧಿವಂತರು, ಹಣ ಸಂಪಾದಿಸುವವರು; ಎನ್‌ಐಎ ತನಿಖೆ ವೇಳೆ ಬಹಿರಂಗ

    ಊಟದ ನಡುವೆ ನೀರು ಕುಡಿಯುವ ಅಭ್ಯಾಸ ಇದ್ಯಾ?; ಹಾಗಿದ್ರೆ ನೀವು ಇದನ್ನು ತಿಳಿಯಲೇ ಬೇಕು….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts