

ಬೆಂಗಳೂರು: ಐದನೇ ವಾರಕ್ಕೆ ಎಂಟ್ರಿ ಕೊಟ್ಟಿರುವ ಬಿಗ್ ಮನೆಯ ಸ್ಪರ್ಧಿಗಳು ಇದೀಗ ಈ ವಾರವೂ ಕೂಡ ಟಾಸ್ಕ್ಗಳಲ್ಲಿ ಜಿದ್ದಾಜಿದ್ದಿಗೆ ಬೀಳದೆ ಕೇವಲ ಮಾತಿನಲ್ಲಿ ಕಿತ್ತಾಡಿಕೊಂಡಿರುವುದು ಮುನ್ನೆಲೆಗೆ ಬಂದಿದೆ.
ಇಂದು ಬೆಳಗ್ಗೆ ಸ್ಪರ್ಧಿಗಳ ನಡುವೆ ವೈಯಕ್ತಿಕ ವಿಚಾರ ಕುರಿತಂತೆ ಇದ್ದ ಬೇಸರದ ಛಾಯೇ ದೂರ ಮಾಡಲು ತುಕಾಲಿ ಸಂತೋಷ್ ಹೆಣ್ಣಿನ ವೇಷ ಧರಿಸಿ, ಮನೆಮಂದಿಯನ್ನು ನಗೆಗಡಲಲ್ಲಿ ತೇಲಿಸಿದರು. ಅಬ್ಬಾ ಕಡೆಗೂ ಸದಸ್ಯರೆಲ್ಲರೂ ನಕ್ಕರು ಎಂದು ನೋಡುವಷ್ಟರಲ್ಲಿ ಮತ್ತೊಮ್ಮೆ ಪರಸ್ಪರ ಏರುಧ್ವನಿಯಲ್ಲಿ ಜಗಳವಾಡಿದ್ದಾರೆ.
ಬುಧವಾರದ ಸಂಚಿಕೆಯಲ್ಲಿ ಎದುರಾಳಿ ತಂಡದ ಸ್ಫರ್ಧಿಗಳ ಮುಖದ ಮೇಲೆ ವಿವಿಧ ಭಾವಗಳನ್ನು ಮೂಡಿಸುವ ಟಾಸ್ಕ್ ಅನ್ನು ಬಿಗ್‌ಬಾಸ್ ನೀಡಿದ್ದರು. ಹಾಗೆ ನೋಡಿದರೆ ಕೃತಕವಾಗಿ ಪ್ರಯತ್ನಿಸಿ ಆಯಾ ಭಾವವನ್ನು ಮೂಡಿಸಲು ಯಾರೂ ಯಶಸ್ವಿಯಾಗಿರಲಿಲ್ಲ. ಆದರೆ ಇಂದಿನ ಟಾಸ್ಕ್‌ನಲ್ಲಿ ತುಂಬ ಸಹಜವಾಗಿಯೇ ಎಲ್ಲ ಭಾವಗಳೂ ವ್ಯಕ್ತವಾಗುತ್ತಿರುವಂತಿದೆ.
ಒಂದು ಪ್ಲ್ಯಾಸ್ಟಿಕ್ ಬಾಕ್ಸ್‌ನ ಎರಡೂ ಬದಿಯಲ್ಲಿ ಹಗ್ಗಗಳಿಂದ ಕಟ್ಟಲಾಗಿದೆ. ಅದನ್ನು ಎರಡು ಸ್ಪರ್ಧಿಗಳ ಸೊಂಟಕ್ಕೆ ಬಿಗಿಯಲಾಗಿದೆ. ಅದನ್ನು ಇಟ್ಟುಕೊಂಡು ಓಡುವ ಟಾಸ್ಕ್ ಅನ್ನು ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ನೀಡಿದ್ದಾರೆ. ಈ ಟಾಸ್ಕ್‌ನಲ್ಲಿ ಪರಸ್ಪರ ತಳ್ಳಿ, ಕಿರುಚಾಡಿಕೊಳ್ಳುವ ಸನ್ನಿವೇಶಗಳು ಸೃಷ್ಟಿಯಾಗಿವೆ. ವಿನಯ್-ಕಾರ್ತಿಕ್ ನಡುವೆ ತಳ್ಳಾಡುವಿಕೆಗಳು ನಡೆದಿದ್ದರೆ, ಸಂಗೀತಾ ಅವರನ್ನು ಪರೋಕ್ಷವಾಗಿ ಅಣುಕಿಸುವ ಮೂಲಕ ವಿನಯ್ ಇನ್ನಷ್ಟು ಕೆಣಕಿದ್ದಾರೆ.
ಮತ್ತದೇ ‘ಫೇರ್ ಗೇಮ್’ ಚರ್ಚೆ ಏರುದನಿಯಲ್ಲಿಯೇ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ಈ ಟಾಸ್ಕ್‌ನ ಸ್ವರೂಪವೇನು? ಸ್ಪರ್ಧಿಗಳು ಜಿದ್ದಾಜಿದ್ದಿಗೆ ಬಿದ್ದು ಜಗಳವಾಡಲು ಕಾರಣವೇನು? ಈ ಎಲ್ಲಾ ವಿಷಯಗಳನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
ಇದನ್ನೂ ಓದಿ: https://youtube.com/shorts/7Rf7xz3banY
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.