ಲಕ್ಷ ರೂ. ತಲುಪಿದ ಬೆಳ್ಳಿ ಬೆಲೆ

ವಿಜಯವಾಣಿ (1)
Published on

ನವದೆಹಲಿ: ಆಭರಣ ತಯಾರಕರು ಮತ್ತು ಚಿಲ್ಲರೆ ಮಾರಾಟಗಾರರ ಖರೀದಿ ಭರಾಟೆಯ ಮಧ್ಯೆ ಚಿನ್ನದ ಬೆಲೆಯು ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ 1300 ರೂ. ಏರಿಕೆ ಕಂಡಿದೆ.

ಗುರುವಾರ 10 ಗ್ರಾಂಗೆ 88,100 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಶುಕ್ರವಾರ 89,400 ರೂ.ಗೆ ಏರಿತು. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಗುರುವಾರ 87,700 ರೂ. ಇದ್ದದ್ದು ಶುಕ್ರವಾರ 89 ಸಾವಿರಕ್ಕೆ ಏರಿದೆ.

ಬೆಳ್ಳಿ ಕೂಡ 2 ಸಾವಿರ ರೂ.ನಷ್ಟು ಏರಿಕೆ ಕಂಡಿದ್ದು, ನಾಲು ತಿಂಗಳ ಗರಿಷ್ಠಕ್ಕೆ ನೆಗೆದಿದೆ. ಗುರುವಾರ ಕೆಜಿಗೆ 98 ಸಾವಿರ ರೂ. ಇದ್ದ ಬೆಳ್ಳಿ ಶುಕ್ರವಾರ 1 ಲಕ್ಷ ರೂ.ಗೆ ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net