

ನವದೆಹಲಿ: ಸ್ಥಳೀಯ ಆಭರಣ ತಯಾರಕರು ಮತ್ತು ದಾಸ್ತಾನುದಾರರು ಖರೀದಿ ಭರಾಟೆ ಹೆಚ್ಚಿಸಿದ ಪರಿಣಾಮವಾಗಿ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಬೆಳ್ಳಿಯ ದರ 1 ಸಾವಿರ ರೂ.ನಷ್ಟು ಹೆಚ್ಚಾಗಿ ಕೆಜಿಗೆ 1,08,100 ರೂ.ಗಳ ಹೊಸ ದಾಖಲೆ ಬರೆದಿದೆ.
ಶುಕ್ರವಾರ ಕೂಡ (ಜೂನ್ 6) ಬೆಳ್ಳಿಯ ಬೆಲೆ 3 ಸಾವಿರ ರೂ.ನಷ್ಟು ಏರಿಕೆಯಾಗಿ ಕೆಜಿಗೆ 1,07,100 ರೂ.ಗಳಿಗೆ ತಲುಪಿತ್ತು. ಜೂನ್ 5ರಂದು 2 ಸಾವಿರ ರೂ.ನಷ್ಟು ಏರಿಕೆಯಾಗಿ ಕೆಜಿಗೆ 1,04,100 ರೂ.ಗೆ ತಲುಪಿತ್ತು. 2024ರ ಡಿಸೆಂಬರ್ 31ರಿಂದ ಇಲ್ಲಿಯವರೆಗೆ ಬೆಳ್ಳಿ ದರ ಕೆಜಿಗೆ 18,400 ರೂ.
ಏರಿದೆ. ಇದೇ ವೇಳೆ, ಶೇ. 99.9 ಮತ್ತು ಶೇ. 99.5ರಷ್ಟು ಶುದ್ಧತೆಯ ಚಿನ್ನವು ಸೋಮವಾರ 10 ಗ್ರಾಂಗೆ 280 ರೂ. ಕಡಿಮೆಯಾಗಿದ್ದು, 97,780ರೂ.ಗೆ ಮಾರಾಟವಾಗಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.