

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯ ದುರ್ಬಲ ಪ್ರವೃತ್ತಿಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಚಿನ್ನದ ಬೆಲೆ 150 ರೂ. ಇಳಿಕೆಯಾಗಿದೆ.
ಹಿಂದಿನ ವಹಿವಾಟಿನಲ್ಲಿ ಶೇ. 99.9ರಷ್ಟು ಶುದ್ಧತೆಯ 10 ಗ್ರಾಂ ಚಿನ್ನ 78,050ಕ್ಕೆ ಮಾರಾಟವಾಗಿತ್ತು. ಸೋಮವಾರ 77,900 ರೂ.ಗೆ ಮಾರಾಟವಾಗಿದೆ.
ಶೇ. 99.5ರಷ್ಟು ಶುದ್ಧತೆಯ ಚಿನ್ನ ಹಿಂದಿನ ಸೆಷನ್ನಲ್ಲಿ 77,650 ರೂ.ಗೆ ಮಾರಾಟವಾಗಿದ್ದು, ಸೋಮವಾರ 77,500 ರೂ.ಗೆ ಮಾರಾಟವಾಯಿತು. ಬೆಳ್ಳಿ ಬೆಲೆ 500 ರೂ. ಕುಸಿದಿದೆ. ಹಿಂದಿನ ವಹಿವಾಟಿನಲ್ಲಿ ಕೆಜಿಗೆ 93,500 ರೂ.ಗೆ ಮಾರಾಟವಾಗಿದ್ದ ಅದು ಸೋಮವಾರ 93,000 ರೂ.ಗೆ ಇಳಿಯಿತು.