ಪಾಕಿಸ್ತಾನದ ವಿರುದ್ಧ ಭಾರತ ದಾಳಿಗಿಳಿದ್ರೆ ಸಿಖ್​ ಸೈನಿಕರು ಹೋರಾಡಬೇಡಿ; ಗುರುಪತ್ವಂತ್​ ಸಿಂಗ್ ಪನ್ನುನ್​​ ಹೇಳಿಕೆ! | Sikh Soldiers

dk-2025-05-01t213905843-68139cb2a5a76
Published on

Sikh Soldiers : ಭಾರತ ಪಾಕಿಸ್ತಾನ ವಿರುದ್ಧ ದಾಳಿ ಮಾಡಿದ್ರೆ ದೇಶಕ್ಕಾಗಿ ಹೋರಾಡಬೇಡಿ ಎಂದು ಖಲಿಸ್ತಾನ ಪರ ಪ್ರತ್ಯೇಕತಾವಾದಿ ಗುರುಪತ್ವಂತ್​ ಸಿಂಗ್​ ಪನ್ನುನ್​ ಭಾರತೀಯ ಸೇನೆಯಲ್ಲಿನ ಸಿಖ್​ ಸೈನಿಕರಿಗೆ ಕರೆ ನೀಡಿದ್ದಾರೆ.

"ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಅದು ಭಾರತ ಮತ್ತು ಮೋದಿಗೆ ಅಂತಿಮ ಯುದ್ಧವಾಗಿರುತ್ತದೆ. ಭಾರತದ ಕಡೆಯ ಪಂಜಾಬಿಗಳು ಪಾಕಿಸ್ತಾನಿ ಸೈನ್ಯಕ್ಕೆ ಲಂಗಾರ್ ಸೇವೆ ಸಲ್ಲಿಸುತ್ತಾರೆ" ಎಂದು ಪನ್ನು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ ಎಂದು ಡಾನ್ ವರದಿ ಮಾಡಿದೆ.

"ನರೇಂದ್ರ ಮೋದಿಯವರ ದೇಶಭಕ್ತಿಯ ಯುದ್ಧಕ್ಕೆ ಈಗ ಬೇಡ. ಪಾಕಿಸ್ತಾನದ ವಿರುದ್ಧ ಹೋರಾಡಬೇಡಿ. ಪಾಕಿಸ್ತಾನ ನಿಮ್ಮ ಶತ್ರುವಲ್ಲ. ಪಾಕಿಸ್ತಾನ ಸಿಖ್ ಜನರಿಗೆ ಮತ್ತು ಖಲಿಸ್ತಾನಕ್ಕೆ ಸ್ನೇಹಪರ ರಾಷ್ಟ್ರವಾಗಿರುತ್ತದೆ ಮತ್ತು ಇರುತ್ತದೆ. ನಾವು ಪಂಜಾಬ್ ಅನ್ನು ಸ್ವತಂತ್ರಗೊಳಿಸಿದ ನಂತರ, ಪಾಕಿಸ್ತಾನ ನಮ್ಮ ನೆರೆಯವರಾಗಿರುತ್ತದೆ" ಎಂದು ಪ್ರತ್ಯೇಕತಾವಾದಿ ಪನ್ನು ಹೇಳಿದ್ದಾನೆ ಎಂದು ವರದಿ ಉಲ್ಲೇಖಿಸಿದೆ.

ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ಏ.22ರಂದು ಭಯೋತ್ಪಾದಕ ದಾಳಿ ನಡೆದಿದ್ದು, ಇಬ್ಬರು ವಿದೇಶಿಯರು ಸೇರಿ 26 ಜನ ಭಾರತೀಯರು ದಾಳಿಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆ ಪಾಕಿಸ್ತಾನ ಮತ್ತು ಭಾರತದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net